Mangaluru, ಮಾರ್ಚ್ 5 -- ಯುವ ಕಲಾವಿದ ಪ್ರೀತೇಶ್ ಕುಮಾರ್ ಬಲ್ಲಾಳ್ ಭಾಗ್ ಅವರು ಶಿವಾಜಿ ಪಾತ್ರದಲ್ಲಿ ಅಭಿನಯಿಸುವ ತುಳು ರಂಗಭೂಮಿಯ ಖ್ಯಾತ ನಿರ್ದೇಶಕ ಹಾಗೂ ತುಳು ಸಿನಿಮಾಕ್ಕೊಂದು ಹೊಸ ಆಯಾಮ ನೀಡಿದ ಸ್ಟಾರ್ ಡೈರೆಕ್ಟರ್ ಖ್ಯಾತಿಯ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ವಿನೂತನ ಪರಿಕಲ್ಪನೆಯ ಛತ್ರಪತಿ ಶಿವಾಜಿ ಚಾರಿತ್ರಿಕ ನಾಟಕ ಮಾರ್ಚ್ 6ರಂದು ರಾತ್ರಿ 7 ಗಂಟೆಗೆ ಕಲಾಮಾತೆ ಕಟೀಲು ಭ್ರಮರಾಂಬಿಕೆಯ ದಿವ್ಯ ಅಂಗಣದಲ್ಲಿ ರಂಗಪ್ರವೇಶ ಮಾಡಲಿದೆ.

ಈಗಾಗಲೇ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಶಿವದೂತೆ ಗುಳಿಗೆ ಸಾವಿರಕ್ಕೂ ಸನಿಹ ರಂಗಪ್ರದರ್ಶನ ಮೂಲಕ ಜನಮನ್ನಣೆ ಗಳಿಸಿದೆ. ಇದೀಗ ಶಿವಾಜಿ ತುಳು ಭಾಷೆಯಲ್ಲಿ ಬರಲಿದೆ. ಪ್ರತಿಭಾವಂತ ಚಿತ್ರಸಾಹಿತಿ ಹಾಗೂ ಕಥೆಗಾರ ಶಶಿರಾಜ್ ಕಾವೂರು ಅವರ ಅಧ್ಯಯನಾತ್ಮಕ ಕಥೆ ಆಧರಿಸಿ ಮರಾಠಿ ವಾತಾವರಣದ ಕಥೆಯನ್ನು ತುಳು ಭಾಷೆಯಲ್ಲಿ ಪ್ರದರ್ಶನ ಮಾಡಲಾಗುತ್ತದೆ.

ಈಗಾಗಲೇ ಇದಕ್ಕೆ ಸಿನಿಮಾ ಶೈಲಿಯ ಡಬ್ಬಿಂಗ್, ಸಿನಿಮಾಗ್ರಫಿ, ರಂಗವಿನ್ಯಾಸ ಬಳಸಿ, ಚಾರಿತ್ರಿಕ ನಾಟಕವನ್ನಾಗಿ ರೂಪುಗೊಳಿಸಲಾಗಿದ್ದು, ಕೊಡಿಯಾ...