ಭಾರತ, ಏಪ್ರಿಲ್ 14 -- ಮಂಗಳೂರು: ಕರ್ನಾಟಕ ಕಡಲತೀರದಲ್ಲಿ ವಿದೇಶಿಯರ ವಿರುದ್ಧ ಹೋರಾಡಿದ ಪ್ರಮುಖರಲ್ಲಿ ಓರ್ವರಾದ ರಾಣಿ ಅಬ್ಬಕ್ಕನ ಕುರಿತು ಹಲವು ವ್ಯಾಖ್ಯಾನಗಳಿವೆ. ಈ ಹಿನ್ನೆಲೆಯಲ್ಲಿ ವಿಚಾರಸಂಕಿರಣವೊಂದು ನಡೆಯಲಿದ್ದು, ಇದರಲ್ಲಿ ರಾಣಿ ಅಬ್ಬಕ್ಕ ಕುರಿತು ಹಲವು ಚರ್ಚೆ, ವಿಚಾರವಿಮರ್ಶೆಗಳು ನಡೆಯುವ ಸಾಧ್ಯತೆ ಇದೆ.

ರಾಣಿ ಅಬ್ಬಕ್ಕನ ಸಾಹಸ ಹಾಗೂ ತಾಯ್ನೆಲದ ಪ್ರೀತಿಯನ್ನು ಜಗತ್ತಿಗೆ ಸಾರುವ ಉದ್ದೇಶ ದಿಂದ ಹಾಗೂ ಅಬ್ಬಕ್ಕನ ಕುರಿತಂತೆ ಚರಿತ್ರೆಯಲ್ಲಿರುವ ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆಯನ್ನು ಒದಗಿಸುವ ಉದ್ದೇಶದೊಂದಿಗೆ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಿಂದ ಬೆಂಗಳೂರಿಗೆ ಸಾಗುವ ರಸ್ತೆಯಲ್ಲಿ ಸುಮಾರು 25 ಕಿ.ಮೀ. ದೂರದಲ್ಲಿರುವ ಬಿ.ಸಿ.ರೋಡ್ ನ ಸಂಚಯಗಿರಿ ಎಂಬಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಮತ್ತು ತುಳು ಬದುಕು ವಸ್ತುಸಂಗ್ರಹಾಲಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಏಪ್ರಿಲ್ 18ರಂದು ರಾಣಿ ...