ಭಾರತ, ಮಾರ್ಚ್ 4 -- ತುಲಾ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಚಿತ್ತ ನಕ್ಷತ್ರದ 3 ಮತ್ತು 4ನೇ ಪಾದಗಳು, ಸ್ವಾತಿ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ವಿಶಾಖ ನಕ್ಷದ 1,2 ಮತ್ತು 3ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ತುಲಾ ರಾಶಿಯಾಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ರ ಮತ್ತು ರಿ ಆದಲ್ಲಿ ಚಿತ್ತ ನಕ್ಷತ್ರ ರು,ರೆ,ರೊ ಮತ್ತು ತ ಆದಲ್ಲಿ ಸ್ವಾತಿ ನಕ್ಷತ್ರ ಹಾಗೂ ತಿ,ತು ಮತ್ತು ತೆ ಆದಲ್ಲಿ ವಿಶಾಖ ನಕ್ಷತ್ರ ಹಾಗು ತುಲಾ ರಾಶಿ ಆಗುತ್ತದೆ. ತುಲಾ ರಾಶಿಯು 12 ರಾಶಿಗಳ ರಾಶಿ ಚಕ್ರದಲ್ಲಿ 7ನೇ ರಾಶಿ. ಮಹತ್ವಾಕಾಂಕ್ಷೆ ಈ ರಾಶಿಗೆ ಸೇರಿದವರಿಗೆ ಇರುವ ಸಹಜ ಸ್ವಭಾವ. ಇವರು ಸ್ವತಂತ್ರವಾಗಿ ಬದುಕಲು ಇಷ್ಟಪಡುತ್ತಾರೆ. ಚಿತ್ತಚಾಂಚಲ್ಯ ಇವರ ವ್ಯಕ್ತಿತ್ವದಲ್ಲಿರುವ ಒಂದು ಸಣ್ಣ ಕಪ್ಪುಚುಕ್ಕೆ. ಮೇಲ್ನೋಟಕ್ಕೆ ನಿರ್ಲಿಪ್ತರಾಗಿರುವಂತೆ ಕಾಣಿಸಿದರೂ, ಒಳಮನಸ್ಸಿನಲ್ಲಿ ಆಲೋಚನೆಗಳು ಸದಾ ಭೋರ್ಗರೆಯುತ್ತಲೇ ಇರುತ್ತವೆ.

ಈ ರಾಶಿಯಲ್ಲಿ ಜನಿಸಿರುವ ಮಹಿಳೆಯರು ವಿಶೇಷವಾದ ಜನಾಕರ್ಷಣ ಶಕ್ತಿಯನ್ನು ಹೊಂದಿರುತ್ತಾರೆ. ಸಣ್ಣ ಪುಟ್ಟ ಕ...