Tumkur, ಮಾರ್ಚ್ 1 -- ಕರ್ನಾಟಕದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠದಲ್ಲಿದೆ ಹೆಣ್ಣಾನೆ ಲಕ್ಷ್ಮಿ. ಮಠದ ಗುರುಗಳಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರಿಗೆ ಆನೆ ಕಂಡರೆ ಪ್ರೀತಿ, ಕಕ್ಕುಲಾತಿ.

ಮಠದಲ್ಲಿ ಹಲವು ವರ್ಷದಿಂದ ಆನೆ ಲಕ್ಷ್ಮಿ ನಿತ್ಯ ಮಠದೊಳಗೆ ಸುತ್ತು ಹಾಕುತ್ತದೆ., ಭಕ್ತರೊಂದಿಗೆ ಒಡನಾಡುತ್ತದೆ. ಅಷ್ಟೇ ಅಲ್ಲ ಸ್ವಾಮೀಜಿ ಅವರ ಬಳಿಯೂ ಬಂದ ಸೊಂಡಿಲೆತ್ತಿ ನಮಸ್ಕರಿಸುತ್ತದೆ.

ಸ್ವಾಮೀಜೀ ಪ್ರೀತಿಯಿಂದ ಬಾ ಎಂದಾಗ ಲಕ್ಷ್ಮಿ ಸ್ಪಂದನೆಯ ಹಾಗೆಯೇ ಇರುತ್ತದೆ. ಆಗ ಸ್ವಾಮೀಜಿ ತಮ್ಮ ಬಳಿ ಇರುವ ಸೊಪ್ಪು, ಹ‍‍ಣ್ಣು ಏನನ್ನಾದರೂ ನೀಡುತ್ತಾರೆ. ಅದನ್ನು ಪ್ರೀತಿಯಿಂದಲೇ ಲಕ್ಷ್ಮಿ ಸೇವಿಸುತ್ತದೆ.

ಸ್ವಾಮೀಜಿ ಅವರು ಆನೆ ಕಂಡೊಡನೆ ಮಾತೃ ಹೃದಯಿಯಾಗಿ ಮಾತನಾಡಿಸುತ್ತಾರೆ. ಆನೆಗಳು ಧ್ವನಿ ಹಾಗೂ ವಾಸನೆ ಹಿಡಿದು ವ್ಯಕ್ತಿಯನ್ನು ಗುರುತಿಸುತ್ತೇವೆ. ಹಾಗೆ ಸ್ವಾಮೀಜಿ ಅವರ ಧ್ವನಿಗೆ ಲಕ್ಷ್ಮಿ ಸ್ಪಂದಿಸುತ್ತದೆ.

ಲಕ್ಷ್ಮಿ ಗೌರವ ಹಾಗೂ ಸ್ವಾಮೀಜಿ ಅವರ ಪ್ರೀತಿಯನ್ನು ಕಂಡ ಮಠದ ಭಕ್ತರಿಗೂ ಖುಷಿ. ಈ ಕ್ಷಣಗಳನ್ನು ಅಲ್ಲಿ...