ಭಾರತ, ಏಪ್ರಿಲ್ 17 -- ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀವೀರಭದ್ರ ಸ್ವಾಮಿ ರಥೋತ್ಸವ ಗುರುವಾರ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಚೋಳಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ, ಭಕ್ತಿಭಾವ ತುಂಬಿ ತುಳುಕುತ್ತಿತ್ತು. ಪ್ರತಿವರ್ಷ ಯುಗಾದಿ ಹಬ್ಬದ ನಂತರದ 15 ದಿನಗಳ ಬಳಿಕ ಈ ಜಾತ್ರೋತ್ಸವ ನಡೆಯುವುದು ವಾಡಿಕೆ.

ಚೋಳರ ಕಾಲದ ದೇವಾಲಯ ಇದಾಗಿದ್ದು, ಐದು ನೂರು ವರ್ಷಗಳ ಇತಿಹಾಸವಿದೆ, ಪ್ರತಿವರ್ಷ ಯುಗಾದಿ ಹಬ್ಬದ ನಂತರದ 15 ದಿನಗಳಿಗೆ ಆರಂಭವಾಗುವ ಶ್ರೀ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ ಸುಮಾರು ಒಂದು ವಾರಗಳ ಕಾಲ ನಡೆಯುವುದು ವಾಡಿಕೆ, ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ರಥ ಹೋಮ, ರಥ ಪ್ರತಿಷ್ಠಾಪನೆ ನಡೆದು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಹರಳೂರು ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಮಹಾ ರಥೋತ್ಸವ ನಡೆಯಿತು, ಸರ್ವಾಲಂಕೃತ ಶ್ರೀವೀರಭದ್ರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸಿ ರಥೋತ್ಸವ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ 7.3...