ಭಾರತ, ಫೆಬ್ರವರಿ 5 -- ತುಮಕೂರು: ಮಾಂಸ ಪ್ರಿಯರಿಗೆ ಭರ್ಜರಿ ಊಟ ಸವಿಯಲು ತುಮಕೂರಿನಲ್ಲಿ ಸಾಕಷ್ಟು ಹೋಟೆಲ್‌ಗಳಿವೆ. ಅದೇ ರೀತಿ ಸಮುದ್ರಾಹಾರ ಪ್ರಿಯರಿಗೆ ಮೀನು ತಿನ್ನಲು ಅನೇಕ ಹೋಟೆಲ್‌ಗಳಿವೆ. ಅದರಲ್ಲೂ ತುಮಕೂರಿನ ಎಂ. ಜಿ. ಸ್ಟೇಡಿಯಂ ಬಳಿ ಇರುವ ಮತ್ಸ್ಯದರ್ಶಿನಿ ಹೋಟೆಲ್ ಫಿಶ್ ಪ್ರಿಯರ ಫೇವರಿಟ್ ಎನಿಸಿಕೊಂಡಿದೆ. ಮೀನು ಸವಿದರೆ ಮೆದುಳು ಸ್ಟ್ರಾಂಗ್ ಆಗಲಿದೆ ಎಂಬ ಮಾತಿದೆ. ಬಗೆ ಬಗೆಯ ಮೀನು ಇಂದು ಎಲ್ಲಡೆ ಸಿಗುತ್ತದೆ. ಆದರೆ ಮತ್ಸ್ಯ ದರ್ಶಿನಿ ಹೋಟೆಲ್‌ನಲ್ಲಿ ಉತ್ತಮ ಗುಣಮಟ್ಟದ ಹಾಗೂ ಶುಚಿ, ರುಚಿಯಾದ ಮೀನೂಟ ಸಿಗುವುದರಿಂದ ಗ್ರಾಹಕರು ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ. ಮನೆಯಲ್ಲಿ ಮಾಡುವ ರೀತಿಯೇ ಇಲ್ಲಿನ ಮೀನೂಟ ಸಮುದ್ರಾಹಾರ ಪ್ರಿಯರಿಗೆ ಅಚ್ಚುಮೆಚ್ಚು.

ಬಂಗುಡೆ ಮೀನು ಫ್ರೈ, ಬಂಗುಡೆ ತವಾ ಫ್ರೈ, ಅಂಜಲ್ ಫ್ರೈ, ಅಂಜಲ್ ತವಾ ಫ್ರೈ, ಪ್ರಾನ್ಸ್‌ ತವಾ ಫ್ರೈ, ಬೋನ್ ಲೆಸ್ ಕಬಾಬ್, ಡಿಸ್ಕೋ ತವಾ ಫ್ರೈ, ಬೂತಾಯಿ ತವಾ ಫ್ರೈ, ಸಿಲ್ವರ್ ಫ್ರೈ ಹೀಗೆ ಬಗೆಬಗೆಯ ಮೀನೂಟದ ಆಯ್ಕೆ ಸಮುದ್ರಾಹಾರ ಪ್ರಿಯರಿಗೆ ಇಲ್ಲಿ ಲಭ್ಯವಿದೆ. ಇದೇ ...