Bengaluru, ಫೆಬ್ರವರಿ 1 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಜನವರಿ 31ರ ಸಂಚಿಕೆಯಲ್ಲಿ ಸಿದ್ದೇಗೌಡ್ರು ಮನಸಿನಲ್ಲೇ ಕೊರಗುತ್ತಿದ್ದಾರೆ. ಆಕ್ಸಿಡೆಂಟ್ ವಿಚಾರವನ್ನು ಮನೆಯಲ್ಲಿ ಹೇಳಲೂ ಆಗದೇ, ಮನಸ್ಸಿನಲ್ಲಿ ಇರಿಸಿಕೊಳ್ಳಲೂ ಆಗದೇ ಚಡಪಡಿಸುತ್ತಿದ್ದಾರೆ. ಇದರಿಂದ ತುಂಬ ಕಿರಿಕಿರಿ ಅನುಭವಿಸುತ್ತಿರುವುದು ಕಂಡುಬಂದಿದೆ. ಭಾವನಾ ಕೇಳಿದರೂ ಅದಕ್ಕೆ ಸಿದ್ದೇಗೌಡರು ಉತ್ತರಿಸಲಿಲ್ಲ. ಹೀಗಾಗಿ ಮತ್ತೆ ಅವರ ಮನಸ್ಸಿಗೆ ನೋವು ಮಾಡುವುದು ಬೇಡ ಎಂದು ಭಾವನಾ ಸುಮ್ಮನಾಗಿದ್ದಾಳೆ. ಒಂದೇ ಕೋಣೆಯಲ್ಲಿ ಮಲಗಿದ್ದರೂ, ಇಬ್ಬರಲ್ಲೂ ಪರಸ್ಪರ ಮಾತುಕತೆ ಇರುವುದಿಲ್ಲ.

ತೀರ್ಥಯಾತ್ರೆಗೆ ತೆರಳಿದ್ದ ಲಕ್ಷ್ಮೀ, ಮನೆಗೆ ಮರಳಿ ಬಂದಿದ್ದಾಳೆ. ಆಕೆಯನ್ನು ಶ್ರೀನಿವಾಸ್ ಮತ್ತು ವೀಣಾ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಯಾತ್ರೆಯ ವಿಚಾರಗಳನ್ನು ಹಂಚಿಕೊಂಡ ಬಳಿಕ ಲಕ್ಷ್ಮೀ, ಶ್ರೀನಿವಾಸ್ ಅವರಲ್ಲಿ ಯಾಕೆ ನೀವು ಇಷ್ಟೊಂದು ಸಪ್ಪಗಿದ್ದೀರಿ ಎಂದು ಕೇಳುತ್ತಾಳೆ. ಆಗ ಶ್ರೀನಿವಾಸ್ ಹಾಗೇನೂ ಇಲ್ಲ, ನಾನು ಆರಾಮವಾಗಿದ್ದೇನೆ ಎಂ...