ಭಾರತ, ಫೆಬ್ರವರಿ 12 -- Karnataka Kumbh mela 2025: ಉತ್ತರ ಭಾರತದ ಕುಂಭಮೇಳ ಕೋಟ್ಯಂತರ ಜನರನ್ನು ಸೆಳೆದು ಮಾಸಾಂತ್ಯದವರೆಗೂ ಇರುವ ನಡುವೆಯೇ ಕರ್ನಾಟಕದ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲೂ ಕುಂಭಮೇಳ ಯಶಸ್ವಿಯಾಗಿ ಮುಕ್ತಾಯವಾಯಿತು. ದಕ್ಷಿಣ ಪ್ರಯಾಗ ಎಂದೇ ಗುರುತಿಸಿಕೊಂಡಿರುವ ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರ ಗುಪ್ತಗಾಮಿನಿ ನದಿ ತ್ರಿವೇಣಿ ಸಂಗಮದಲ್ಲಿ ಮೂರು ದಿನಗಳ ಕಾಲ ಕುಂಭಮೇಳ ಜರುಗಿತು. ಎರಡು ದಿನವೂ ಭಕ್ತರು ಪುಣ್ಯಸ್ನಾನ ಮಾಡಿದ್ದರೂ ಕೊನೆಯ ದಿನವಾದ ಬುಧವಾರ ಈ ಸಂಖ್ಯೆ ಹೆಚ್ಚಿತ್ತು. ಭಾರತ್‌ ಹುಣ್ಣಿಮೆ ದಿನವೂ ಆಗಿರುವ ಬುಧವಾರ ಮಾಘಸ್ನಾನಕ್ಕೆ ಪ್ರಾಶಸ್ತ್ಯ ಸಮಯ ಎಂದು ತಿಳಿಸಲಾಗಿತ್ತು. ಮಧ್ಯಾಹ್ನದ ಸಮಯದಲ್ಲಿ ಪುಣ್ಯ ಸ್ನಾನಕ್ಕೆ ಸೂಕ್ತ ಎನ್ನುವ ಕಾರಣಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಸ್ನಾನ ಮಾಡಿ ಪುಳಕಿತಗೊಂಡರು. ಸಂಜೆವರೆಗೂ ಸ್ನಾನ ಮುಂದುವರೆದರೂ ಎರಡು ಪುಣ್ಯ ಸ್ನಾನದ ವೇಳೆ ಸಹಸ್ರಾರು ಮಂದಿ ಭಾಗಿಯಾದರು.

ಮೈಸೂರು ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ವಿವಿಧ...