ಭಾರತ, ಏಪ್ರಿಲ್ 13 -- Slippers In Tirupati Temple: ಆಂಧ್ರ ಪ್ರದೇಶದ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದ ಆಡಳಿತ ಸಡಿಲವಾಗಿದೆ ಎಂಬ ಟೀಕೆ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾಗಿದ್ದು ಒಂದು ವೈರಲ್ ವಿಡಿಯೋ. ಹೌದು, ತಿರುಮಲ ತಿರುಪತಿ ದೇವಸ್ಥಾನದ ಮಹಾದ್ವಾರದ ತನಕ ಮೂವರು ಭಕ್ತರು ಚಪ್ಪಲಿ ಧರಿಸಿ ಹೋದ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ತಾಣದಲ್ಲಿ ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು ಟಿಟಿಡಿ ಆಡಳಿತ ಹಿಡಿತ ತಪ್ಪಿದೆ ಎಂಬ ಅಸಮಾಧಾನ, ಆಕ್ಷೇಪಗಳು ಕಂಡುಬಂದಿವೆ.

ತಿರುಮಲ ತಿರುಪತಿ ದೇವಸ್ಥಾನದ ಮಹಾದ್ವಾರದ ತನಕ ಚಪ್ಪಲಿ ಧರಿಸಿ ಹೋದ ಮೂವರು ಭಕ್ತರ ನಡೆ ಕೂಡ ಅಸಮಾಧಾನಕ್ಕೆ ಕಾರಣವಾಗಿದೆ. ದೇವಸ್ಥಾನದ ಸಂಪ್ರದಾಯ, ಅಚರಣೆಗಳ ಅರಿವು ಇಲ್ಲವೇ ಎಂಬಿತ್ಯಾದಿ ಪ್ರಶ್ನೆಗಳು ಸಾಮಾಜಿಕ ತಾಣಗಳಲ್ಲಿ ಕಂಡುಬಂದಿದೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯದಲ್ಲಿ, ದೇವಸ್ಥಾನದ ಮಹಾದ್ವಾರದ ಸಮೀಪ ಮೂವರು ಭಕ್ತರು ಬಿಳಿ ಚಪ್ಪಲಿ ಧರಿಸಿ ಸರದಿಯಲ್ಲಿ ಸಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಚಪ...