Bengaluru, ಮೇ 20 -- ಪುರಾತನ ಧಾರ್ಮಿಕ ಗ್ರಂಥಗಳನ್ನು ಪರಿಶೀಲಿಸುವ ವೇಳೆ ಕೃತಯುಗದಲ್ಲಿ ಗರುಡಾದ್ರಿ ಎಂಬ ಪರ್ವತ ಇತ್ತೆಂದು ತಿಳಿದುಬರುತ್ತದೆ. ತ್ರೇತಾಯುಗದಲ್ಲಿ ಈ ಪರ್ವತದ ಹೆಸರು ವೃಷಭಾದ್ರಿ ಎಂಬ ಹೆಸರನ್ನು ಪಡೆಯುತ್ತದೆ. ಪರ್ವತದ ಈ ಹೆಸರು ಒಬ್ಬ ರಾಕ್ಷಸನ ಹೆಸರಾಗಿದೆ. ರಾಕ್ಷಸನಾದರೂ ಅವನಿಗೆ ಭಗವಂತನಲ್ಲಿ ಅಸಾಧಾರಣ ಭಕ್ತಿ ಇರುತ್ತದೆ. ಅಷ್ಟುಮಾತ್ರವಲ್ಲದೆ ತನ್ನ ಜೀವನದಲ್ಲಿ ಯಾವುದೋ ಒಂದು ದೊಡ್ಡ ಸಾಧನೆ ಮಾಡಬೇಕೆಂಬ ಗುರಿ ಇರುತ್ತದೆ. ಈ ಕಾರಣದಿಂದ ವೃಷಭಾಸುರನು ಅಲ್ಲಿಯೇ ಇದ್ದ ಎತ್ತರದ ಮತ್ತು ಕಡಿದಾದ ಬೆಟ್ಟದಲ್ಲಿ ಘೋರ ತಪಸ್ಸನ್ನು ಆಚರಿಸಲು ಆರಂಭಿಸುತ್ತಾನೆ.

ಆ ಬೆಟ್ಟದಲ್ಲಿ ಪುಣ್ಯತೀರ್ಥವೊಂದು ಇರುತ್ತದೆ. ಪ್ರತಿದಿನ ವೃಷಭಾಸುರನು ಸೂರ್ಯೋದಯಕ್ಕೆ ಮುನ್ನವೆ ಸ್ನಾನವನ್ನು ಮಾಡುತ್ತಾನೆ. ಅತಿಯಾದ ವಿನಯ ಮತ್ತು ಭಯ ಭಕ್ತಿಯಿಂದ ಭಗವಂತನನ್ನು ಕುರಿತು ತಪಸ್ಸನ್ನು ಮಾಡುತ್ತಿರುತ್ತಾನೆ. ಒಂದು ದಿನ ದೇವರ ಪೂಜೆಯನ್ನು ಮಾಡಿದ ನಂತರ ದೇವರಿಗೆ ತನ್ನ ತಲೆಯನ್ನೇ ಕತ್ತರಿಸಿ ಅಲ್ಲಿಯೇ ದೊರೆಯುತ್ತಿದ್ದ ಹೂವಿನ ಜೊತೆಯಲ್ಲಿ ...