ಭಾರತ, ಫೆಬ್ರವರಿ 10 -- ನವದೆಹಲಿ: ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಮಾಡಿದ ಆರೋಪದ ಮೇಲೆ, ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು ನಾಲ್ವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ಪೈಕಿ ತಮಿಳುನಾಡಿನ ಎಆರ್ ಡೈರಿ, ಉತ್ತರ ಪ್ರದೇಶದ ಪರಾಗ್ ಡೈರಿ, ಪ್ರೀಮಿಯರ್ ಅಗ್ರಿ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಸೇರಿದಂತೆ ಲಡ್ಡು ತಯಾರಿಗೆ ತುಪ್ಪ ಸರಬರಾಜು ಮಾಡುವ ಸಂಸ್ಥೆಗಳ ವ್ಯಕ್ತಿಗಳು ಸೇರಿದ್ದಾರೆ.

ಲಡ್ಡು ತಯಾರಿಗೆ ತುಪ್ಪ ಪೂರೈಕೆ ಸಮಯದಲ್ಲಿ ಕೆಲವು ನಿಯಮಗಳ ಗಂಭೀರ ಉಲ್ಲಂಘನೆಯಾಗಿರುವುದನ್ನು ತನಿಖೆ ಬಹಿರಂಗಪಡಿಸಿದೆ. ತಯಾರಿಯ ಪ್ರತಿ ಹಂತದಲ್ಲೂ ಅಕ್ರಮಗಳಿವೆ ಎಂದು ತನಿಖೆಯಿಂದ ತಿಳಿದು ಬಂದಿದೆ.

ವೈಷ್ಣವಿ ಡೈರಿಯ ಪ್ರತಿನಿಧಿಗಳು ತುಪ್ಪ ಪೂರೈಕೆಗಾಗಿ ಎಆರ್ ಡೈರಿಯ ಹೆಸರಿನಲ್ಲಿ ಟೆಂಡರ್‌ ಪಡೆದುಕೊಂಡರು. ವೈಷ್ಣವಿ ಡೈರಿಯು ಸುಳ್ಳು ದಾಖಲೆ ಮಾತ್ರವಲ್ಲದೆ ಸೀಲ್‌ ತಯಾರಿಸಿ ವಂಚಿಸಿದೆ. ಅಲ್ಲದೆ ಟೆಂಡರ್ ಪ್ರಕ್ರಿಯೆ...