ಭಾರತ, ಏಪ್ರಿಲ್ 20 -- ನಟಿ ಸಮಂತಾ ರುತ್‌ ಪ್ರಭು ಅವರು ಶುಭಂ ಮೂಲಕ ನಿರ್ಮಾಪಕರಾಗುತಿದ್ದಾರೆ. ಈ ಸಿನಿಮಾ ಮುಂದಿನ ತಿಂಗಳು ಅಂದರೆ ಮೇ 9ರಂದು ರಿಲೀಸ್‌ ಆಗಲಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನ ನಟಿಯು ತಿರುಪತಿ ಬಾಲಾಜಿ ದೇಗುಲಕ್ಕೆ ನಿನ್ನೆ ಭೇಟಿ ನೀಡಿದ್ದಾರೆ. ಈಕೆಯ ಜತೆ ನಿರ್ದೇಶಕ ರಾಜ್‌ ನಿಧಿಮೋರು ಕೂಡ ಇದ್ದರು. ಇದು ಸಮಂತಾ ಮತ್ತು ರಾಜ್‌ ಅವರ ಡೇಟಿಂಗ್‌ ವದಂತಿಗೆ ತುಪ್ಪ ಸುರಿದಿದೆ. ನಾಗ ಚೈತನ್ಯರಿಗೆ ಡಿವೋರ್ಸ್‌ ನೀಡಿದ ಬಳಿಕ ಸಮಂತಾರ ಬಾಯ್‌ ಫ್ರೆಂಡ್‌ ಈ ರಾಜ್‌ ನಿಧಿಮೋರು ಎನ್ನಲಾಗುತ್ತಿದೆ. ಕಳೆದ ವರ್ಷ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಅವರನ್ನು ವಿವಾಹವಾಗಿದ್ದರು.

ನಟಿ ಸಮಂತಾ ರುತ್‌ ಪ್ರಭು ಅವರು ಸಾಂಪ್ರದಾಯಿಕ ಸಲ್ವಾರ್‌ ಕಮೀಜ್‌ ತೊಟ್ಟು ತಿರುಪತಿ ವೆಂಕಟೇಶ್ವರ ದೇವರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ತೆಳು ಗುಲಾಬಿ ಬಣ್ಣದ ಸಲ್ವಾರ್‌ನಲ್ಲಿ ಸಮಂತಾ ಆಕರ್ಷಕವಾಗಿ ಕಾಣುತ್ತಿದ್ದರು.

ಸಮಂತಾ ರುತ್‌ ಪ್ರಭು ಮತ್ತು ರಾಜ್‌ ಇಬ್ಬರು ಜತೆಯಾಗಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಅವರೊಂದಿಗೆ ಇತರೆ ಭದ್ರತಾ ಸಿ...