Bengaluru, ಏಪ್ರಿಲ್ 9 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 8ರ ಸಂಚಿಕೆಯಲ್ಲಿ ಭಾಗ್ಯ ಊಟದ ಆರ್ಡರ್ ಸಿಕ್ಕಿತು ಎಂದು ಅದನ್ನು ತೆಗೆದುಕೊಂಡು ಮನೆಗೆ ಕೊಡಲು ಹೋಗಿದ್ದಾಳೆ. ಅವಳು ಮನೆಗೆ ಹೋದಾಗ ಅಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಅವಳಿಗೆ ಸಂಶಯ ಉಂಟಾಗುತ್ತದೆ, ಹೀಗಾಗಿ ಭಾಗ್ಯ ಮತ್ತೊಮ್ಮೆ ಊಟದ ಆರ್ಡರ್ ಕೊಟ್ಟಿದ್ದ ಮಹಿಳೆಗೆ ಫೋನ್ ಮಾಡುತ್ತಾಳೆ. ಆಕೆ ಫೋನ್ ಸ್ವೀಕರಿಸಿ, ಶ್ರೇಷ್ಠಾ ಸೂಚನೆಯಂತೆ, ಇವತ್ತು ಪ್ರೋಗ್ರಾಂ ಕ್ಯಾನ್ಸಲ್ ಆಯಿತು, ನೀವು ರೆಡಿ ಮಾಡಿದ ಊಟ ನಮಗೆ ಬೇಡ, ಸ್ವಾರಿ ಎಂದು ಕಥೆ ಹೇಳುತ್ತಾಳೆ. ಅದನ್ನು ಕೇಳಿ ಭಾಗ್ಯಗೆ ದಿಕ್ಕೇ ತೋಚದಂತಾಗುತ್ತದೆ. ಭಾಗ್ಯ ಮತ್ತೊಮ್ಮೆ ಅವರಲ್ಲ ವಿನಿಂತಿಸಿಕೊಂಡರೂ, ಆಕೆ ಕರೆ ಕಟ್ ಮಾಡುತ್ತಾಳೆ. ಬಾಗಿಲು ಕೂಡ ತೆರೆಯದಿರುವುದನ್ನು ಕಂಡು ಭಾಗ್ಯ ಒಮ್ಮೆಲೆ ಏನು ಮಾಡಬೇಕೆಂದು ತೋಚದೆ ಕುಳಿತುಕೊಳ್ಳುತ್ತಾಳೆ.

ನಂತರ ಊಟದ ಡಬ್ಬಿಗಳನ್ನು ಹಿಡಿದುಕೊಂಡು ಅಲ್ಲಿಂದ ವಾಪಸ್ ಹೋಗಲು ಅನುವಾಗುತ್ತಾಳೆ. ಇನ್ನೇನು ಗೇಟಿನ ಬಳಿ ತಲುಪುತ್ತಾಳೆ ಎನ್ನುವ...