Bengaluru, ಮಾರ್ಚ್ 20 -- ಬೆಂಗಳೂರು: ಕಾರ್ಪೊರೇಟ್‌ನ ಉದ್ಯೋಗಿಯೊಬ್ಬರು ತಿಂಗಳಿಗೆ 30,000 ರೂಪಾಯಿ ವೇತನ ಹೆಚ್ಚಳ ಸಿಕ್ಕಿತು ಎಂದು ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದರು. ಆ ನಂತರ ಅವರು ಅನುಭವಿಸಿದ ಯಾತನೆಯನ್ನು, ಗೋಳಿನ ಕಥೆ- ವ್ಯಥೆಯನ್ನು ರೆಡ್ಡಿಟ್ ತಾಣದಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ವೈರಲ್ ಆಗಿದೆ. ಬಹುತೇಕ, ಬೆಂಗಳೂರು ಮಹಾನಗರದ ಮೂಲಸೌಕರ್ಯ, ಟ್ರಾಫಿಕ್ ಜಾಮ್‌, ಬದುಕಿನ ಗುಣಮಟ್ಟ ಮುಂತಾದವುಗಳನ್ನು ಅವರು ಉಲ್ಲೇಖಿಸಿದ್ದು, ಬಹಳ ಚರ್ಚೆಗೆ ಒಳಗಾಗಿದೆ.

ತಿಂಗಳಿಗೆ 30,000 ರೂ ವೇತನ ಹೆಚ್ಚು ಸಿಗುತ್ತೆ ಅಂತ ನೋಯ್ಡಾ ಬಿಟ್ಟು ಬೆಂಗಳೂರಿಗೆ ಬಂದ ಟೆಕ್ಕಿ ಈಗ ಗೋಳೋ ಅಂತ ಅಳೋದಕ್ಕೆ ಶುರುಮಾಡಿದ್ದಾರೆ. ಹೌದು, ರೆಡ್ಡಿಟ್ ತಾಣದಲ್ಲಿ ಅವರು "ಮೂವ್ಡ್ ಟು ಬೆಂಗಳೂರು ಫ್ರಂ ನೋಯ್ಡಾ ಆಂಡ್ ಐ ರಿಗ್ರೆಟ್ ಇಟ್‌" ಎಂಬ ಶೀರ್ಷಿಕೆಯೊಂದಿಗೆ ತಮ್ಮ ಕಥೆ-ವ್ಯಥೆಯನ್ನು ಹಂಚಿಕೊಂಡಿದ್ದಾರೆ. ಅವರು, ಬೆಂಗಳೂರು ಮಹಾನಗರವನ್ನು ಕೊಳಕು ನಗರ ಎಂದು ಹೇಳಿದ್ದು, ನಗರೀಕರಣ ಸರಿಯಾಗಿ ಆಗಿಲ್ಲ. ಕೆಟ್ಟ ರಸ್ತೆಗಳು, ವಿಪರೀತ ಸಂಚಾರ ದಟ್ಟಣೆ,...