Bengaluru, ಫೆಬ್ರವರಿ 25 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 24ರ ಮಹಾ ಸಂಚಿಕೆಯಲ್ಲಿ ತಾಂಡವ್ ಮತ್ತು ಶ್ರೇಷ್ಠಾ ಮದುವೆ ಪ್ರಹಸನ ನಡೆಯುತ್ತಿದೆ. ಮದುವೆ ನಡೆಯುತ್ತಿರುವ ವಿಚಾರ ಸುಂದರಿಗೆ ಗೊತ್ತಾಗಿದೆ. ಸುಂದರಿ ಈ ಸಂಗತಿಯನ್ನು ಕುಸುಮಾಗೆ ಹೇಳಿದ್ದಾಳೆ. ಕುಸುಮಾ ಭಾಗ್ಯಗೆ ವಿಷಯ ತಿಳಿಸುವ ಸಲುವಾಗಿ ಪದೇ ಪದೆ ಪೋನ್ ಮಾಡಿದರೂ, ಭಾಗ್ಯ ಮಾತ್ರ ರೆಸಾರ್ಟ್‌ನಲ್ಲಿ ಜೋಕರ್ ವೇಷ ಧರಿಸಿ ಕುಣಿಯುವ ಕೆಲಸದಲ್ಲಿ ಬ್ಯುಸಿಯಾಗಿದ್ದಾಳೆ. ಅವಳಿಗೆ ಫೋನ್ ಬಂದಿದ್ದು ಗೊತ್ತಾಗಿಲ್ಲ. ಅಷ್ಟರಲ್ಲಿ, ಭಾಗ್ಯ ಸಹೋದ್ಯೋಗಿ, ಫೋನ್ ಗಮನಿಸಿ, ಅದನ್ನು ಭಾಗ್ಯಗೆ ತಂದು ಕೊಡುತ್ತಾಳೆ. ಕುಸುಮಾ, ಭಾಗ್ಯಾ, ಕೂಡಲೇ ಹೊರಟು ಬಾ, ಇಲ್ಲಿ ದೊಡ್ಡ ಸಮಸ್ಯೆಯಾಗಿದೆ, ದೇವಸ್ಥಾನಕ್ಕೆ ಬಾ ಎಂದಷ್ಟೇ ಹೇಳಿ ಫೋನ್ ಇಡುತ್ತಾಳೆ.

ಭಾಗ್ಯ, ಕೆಲಸದ ಸ್ಥಳದಿಂದ, ಬಟ್ಟೆ ಬದಲಾಯಿಸಿ, ವೇಷ ತೆಗೆದು, ಹೊರಡಲು ಅನುವಾಗುತ್ತಾಳೆ. ಅಲ್ಲಿಂದ ಹೊರಡುತ್ತಿರುವಾಗ ಎದುರಿಗೆ ಮ್ಯಾನೇಜರ್ ಎದುರಾಗುತ್ತಾನೆ. ನನ್ನಲ್ಲಿ ಹೇಳದೆ, ಕೇಳದೆ ಎಲ್ಲಿ ...