Bangalore, ಮೇ 10 -- ಜಾಕ್ವೆಲಿನ್ ಫೆರ್ನಾಂಡಿಸ್ ಮತ್ತು ನೀಲ್ ನಿತಿನ್ ಮುಖೇಶ್ ಅವರ ಸಂಗೀತ ನಾಟಕ ಸರಣಿ ಹೈ ಜುನೂನ್ - ಡ್ರೀಮ್, ಡೇರ್, ಡಾಮಿನೇಟ್, ಮೇ 16ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ ಆಗುತ್ತಿದೆ. ಇದು ಆಂಡರ್ಸನ್ ಕಾಲೇಜಿನಲ್ಲಿ ಗೋಟ್‌ ಟ್ರೋಫಿಗಾಗಿ ಸ್ಪರ್ಧಿಸುತ್ತಿರುವ ಎರಡು ಸಂಗೀತ ಕ್ಲಬ್‌ಗಳಾದ ದಿ ಮಿಸ್‌ಫಿಟ್ಸ್ ಮತ್ತು ದಿ ಸೂಪರ್‌ಸಾನಿಕ್ಸ್ ನಡುವಿನ ಸ್ಪರ್ಧೆಯ ಕಥೆ ಹೊಂದಿದೆ. ಇದು ಬಿಡುಗಡೆಯಾಗುವ ಮುನ್ನ ಒಟಿಟಿಯಲ್ಲಿ ಅತ್ಯುತ್ತಮ ಮ್ಯೂಸಿಕಲ್‌ ಸಿನಿಮಾ ನೋಡಿ.

ತಾಲ್‌: ಈ ಮ್ಯೂಸಿಕಲ್‌ ಡ್ರಾಮಾದಲ್ಲಿ ಐಶ್ವರ್ಯಾ ರೈ ನಟಿಸಿದ್ದಾರೆ. ಶ್ರೀಮಂತ ಅನಿವಾಸಿ ಭಾರತೀಯನ ಮಗ ಮಾನವ್ (ಅಕ್ಷಯ್ ಖನ್ನಾ)ಗೆ ಬಡ ಸಂಗೀತ ಶಿಕ್ಷಕಿಯ ಮಗಳು ಮಾನಸಿ (ಐಶ್ವರ್ಯ ರೈ ಬಚ್ಚನ್) ಮೇಲೆ ಲವ್‌ ಆಗುತ್ತದೆ. ಈ ಚಿತ್ರವು ಸಂಗೀತಮಯವಾಗಿದ್ದು, ಹಲವಾರು ಸ್ಮರಣೀಯ ಹಾಡು ಮತ್ತು ನೃತ್ಯಗಳನ್ನು ಹೊಂದಿದೆ. ಎಆರ್‌ ರೆಹಮಾನ್‌ ಮ್ಯೂಸಿಕ್‌ ಇರುವ ಈ ಸಿನಿಮಾದಲ್ಲಿ ಸರೋಜ್ ಖಾನ್, ಅಹ್ಮದ್ ಖಾನ್ ಮತ್ತು ಶಿಯಾಮಕ್ ದಾವರ್ ನೃತ್ಯ ಸಂಯೋಜನೆ ಇದ...