ಭಾರತ, ಏಪ್ರಿಲ್ 10 -- Manchu Family Controversy: ಟಾಲಿವುಡ್‌ನ ಹಿರಿಯ ನಟ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಮಂಚು ಮೋಹನ್ ಬಾಬು ಅವರ ಕುಟುಂಬದಲ್ಲಿ ನಡೆಯುತ್ತಿರುವ ಆಸ್ತಿ ವಿವಾದವು ಬುಧವಾರ (ಏಪ್ರಿಲ್ 9) ಹೊಸ ತಿರುವು ಪಡೆದುಕೊಂಡಿದೆ. ಮಂಚು ಮನೋಜ್ ತಮ್ಮ ಸಹೋದರ ಮಂಚು ವಿಷ್ಣು ಮನೆಗೆ ನುಗ್ಗಿ ಕಾರ್‌ ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನರಸಿಂಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮಂಚು ಮನೋಜ್ ತಮ್ಮ ಕಾರು ಕಾಣೆಯಾಗಿದ್ದು, ಮಂಚು ವಿಷ್ಣು ಮೇಲೆ ಅನುಮಾನವಿದೆ ಎಂದು ಹೇಳಿದ್ದಾರೆ. 'ನನ್ನ ಮಗಳ ಹುಟ್ಟುಹಬ್ಬವಿದ್ದ ಕಾರಣ ಏಪ್ರಿಲ್‌ 1ರಂದು ನಾನು ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ರಾಜಸ್ಥಾನಕ್ಕೆ ಹೋಗಿದ್ದೆ. ನಮ್ಮ ಮನೆಯಲ್ಲಿ ಯಾರೂ ಇಲ್ಲದಿದ್ದಾಗ, ವಿಷ್ಣು ಮತ್ತು ಅವನ ಸುಮಾರು 150 ಅನುಯಾಯಿಗಳು ನಮ್ಮ ಮನೆಗೆ ಅಕ್ರಮವಾಗಿ ಪ್ರವೇಶಿಸಿ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ಅವರು ನನ್ನ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿದ್ದಲ್ಲದೆ, ನನ್ನ ಕಾರನ್ನು ಸಹ ಕದ್ದಿದ್ದಾರೆ' ಎಂದು ಮಂಚು ಮನೋಜ್ ದೂರಿನಲ್ಲ...