ಭಾರತ, ಮಾರ್ಚ್ 3 -- ಒಂದೆಡೆ ಭಾರತ ಕ್ರಿಕೆಟ್ ತಂಡವು ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ (ICC Champions Trophy) ಪಂದ್ಯಗಳಲ್ಲಿ ನಿರತವಾಗಿದೆ. ಭಾನುವಾರ (ಮಾ.2) ನಡೆದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಟೀಮ್‌ ಇಂಡಿಯಾ ರೋಚಕ ಜಯ ಸಾಧಿಸಿತು. ಆದರೆ, ಅದರ ನಡುವೆ ಟೀಮ್‌ ಇಂಡಿಯಾ ಶಿಬಿರದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. ಭಾರತ ತಂಡದ ಮ್ಯಾನೇಜರ್‌ ಆಗಿರುವ ಆರ್ ದೇವರಾಜ್, ಭಾನುವಾರ ಬೆಳಗ್ಗೆ ತಮ್ಮ ತಾಯಿಯ ನಿಧನವಾದ ನಂತರ ದುಬೈನಿಂದ ತಂಡವನ್ನು ತೊರೆದು ಭಾರತಕ್ಕೆ ಮರಳಿದ್ದಾರೆ. ಸುದ್ದಿ ತಿಳಿದ ದೇವರಾಜ್, ತಕ್ಷಣವೇ ತಮ್ಮ ಕುಟುಂಬದೊಂದಿಗೆ ಸೇರಲು ನಿರ್ಧರಿಸಿ ಹೈದರಾಬಾದ್‌ಗೆ ತೆರಳಿದ್ದಾರೆ.

ಪ್ರಸ್ತುತ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ದೇವರಾಜ್‌, ಭಾನುವಾರವೇ ಭಾರತಕ್ಕೆ ಬಂದಿದ್ದಾರೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ. ಅತ್ತ ರೋಹಿತ್ ಶರ್ಮಾ ನೇತೃತ್ವದ ತಂಡವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳ...