Mysuru, ಮಾರ್ಚ್ 3 -- ಮೈಸೂರು : ಶಿಕ್ಷಣ ನೀಡಿ ಬದುಕು ಕಟ್ಟಿಕೊಟ್ಟ ಶಾಲೆಗೆ ಏನನ್ನಾದರೂ ವಾಪಸ್‌ ಕೊಟ್ಟರೆ ಅದು ಸಮಾಜದ ಋಣ ತೀರಿಸುವ ಮಾರ್ಗವೇ ಆಗಿರುತ್ತದೆ. ಅದನ್ನು ಹಲವರು ಮಾಡಿ ಇತರರೆಗೂ ಮಾದರಿ ಕೂಡ ಆಗಿರುವ ಉದಾಹರಣೆಗಳು ಸಾಕಷ್ಟಿವೆ. ತಾನು ಓದಿದ ಸರ್ಕಾರಿ ಶಾಲೆಗೆ 1.40 ಲಕ್ಷ ರೂಪಾಯಿ ವೆಚ್ಚಸಲ್ಲಿ ಬಣ್ಣವನ್ನು ಉಚಿತವಾಗಿ ಮಾಡಿಸಿದ ಹಳೆಯ ವಿದ್ಯಾರ್ಥಿ ನಾಗೇಗೌಡ ಎಂಬುವರು ಇತರರಿಗೆ ಮಾದರಿಯಾಗಿದ್ದಾರೆ. ಹೆಚ್ ಡಿ ಕೋಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆಗೆ ಅಲ್ಲಿನ ಹಿರಿಯ ವಿದ್ಯಾರ್ಥಿಯೊಬ್ಬರು ಸರಿಸುಮಾರು 1.40 ಲಕ್ಷ ರೂಪಾಯಿ ವೆಚ್ಚದಲ್ಲಿ ಬಣ್ಣ ಹೊಡೆಸುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

ಹೆಚ್ ಡಿ ಕೋಟೆ ಪಟ್ಟಣದ ಕಾಳಿದಾಸ ರಸ್ತೆಯ ನಿವಾಸಿ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆಯ ಹಿರಿಯ ವಿದ್ಯಾರ್ಥಿಯೂ ಹಾಗೂ ಹೆಚ್ ಡಿ ಕೋಟೆಯ ಪ್ರತಿಷ್ಠಿತ ಬಣ್ಣದ ಅಂಗಡಿಯಾದ ಶ್ರೀ ವಿನಾಯಕ ಟೈಲ್ಸ್ ಅಂಡ್ ಹಾರ್ಡ್ ವೇರ್ ಅಂಗಡಿ ಮಾಲೀಕರಾದ ನಾಗೇಗೌಡ ಅವರು, 1.40 ಲಕ್ಷ ಮೌಲ್ಯದ ಬಣ್ಣವನ್...