ಭಾರತ, ಫೆಬ್ರವರಿ 9 -- ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ತಾಂಡೇಲ್ ಸಿನಿಮಾ ಶುಕ್ರವಾರದಂದು (ಫೆ 7) ತೆರೆಗೆ ಬಂದಿದೆ. ಮೀನುಗಾರನ ಪ್ರೇಮ ಹಾಗೂ ದೇಶಭಕ್ತಿಯ ಕಥೆ ಹೊಂದಿರುವ ಈ ಸಿನಿಮಾವನ್ನು ನಿರ್ದೇಶಕ ಚಂದು ಮೊಂಡೆಟಿ ನಿರ್ಮಿಸಿದ್ದಾರೆ. ಮೊದಲ ದಿನ ಈ ಚಿತ್ರವು ವಿಶ್ವಾದ್ಯಂತ 21.27 ಕೋಟಿ ಗಳಿಸಿದೆ. ಸಿನಿಮಾದಲ್ಲಿ ರಶ್ಮಿಕಾ ಮತ್ತು ನಾಗಚೈತನ್ಯ ಇಬ್ಬರ ಅಭಿನಯವೂ ಉತ್ತಮವಾಗಿದೆ ಎಂಬ ಮಾತು ಕೇಳಿಬಂದಿದ್ದು, ಸಿನಿಮಾ ಪಾಸಿಟಿವ್ ಟಾಕ್ ಪಡೆದುಕೊಂಡಿದೆ.

ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅವರ ನಟನೆ, ದೇವಿ ಶ್ರೀ ಪ್ರಸಾದ್ ಅವರ ಹಾಡುಗಳು ಮತ್ತು ಬಿಜಿಎಂ ಚಿತ್ರದ ಪ್ರಮುಖ ಆಕರ್ಷಣೆಗಳಾಗಿದೆ. ಪ್ರಚಾರದ ಸಮಯದಲ್ಲಿ ತಾಂಡೇಲ್ ಪಾಕಿಸ್ತಾನಿ ಕೋಸ್ಟ್ ಗಾರ್ಡ್ ಹಾಗೂ ಜೈಲು ಶಿಕ್ಷೆಗೆ ಒಳಗಾದ ಕೆಲವು ಮೀನುಗಾರರ ಜೀವನವನ್ನು ಆಧರಿಸಿದೆ ಎಂಬ ವಿಚಾರವನ್ನು ನಿರ್ಮಾಪಕರು ಬಹಿರಂಗಪಡಿಸಿದ್ದರು. ಈ ಚಿತ್ರವನ್ನು ಕಾರ್ತಿಕ್ ಎಂಬ ಬರಹಗಾರ ಬರೆದಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಇದೊಂದು ಕಾದಂಬರಿ ಆಧರಿಸಿ ಮ...