Bengaluru, ಮಾರ್ಚ್ 1 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಫೆಬ್ರುವರಿ 28ರ ಸಂಚಿಕೆಯಲ್ಲಿ ಭಾಗ್ಯ ಒಂದು ಕಷ್ಟದಿಂದ ಪಾರಾದಳು ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಭಾಗ್ಯಳಿಗೆ ಅವಳ ತಂಗಿ ಲಕ್ಷ್ಮೀ ಎದುರಾಗಿದ್ದಾಳೆ. ಲಕ್ಷ್ಮೀ ಜತೆ ಮಾತನಾಡುತ್ತಾ ಭಾಗ್ಯ, ನೀನು ಧೈರ್ಯ ಕಳೆದುಕೊಳ್ಳಬೇಡ, ಈ ಸಮಸ್ಯೆಯನ್ನು ನಾವಿಬ್ಬರೂ ಒಟ್ಟಾಗಿ ಎದುರಿಸೋಣ, ನಮ್ಮ ಸಮಸ್ಯೆ ದೊಡ್ಡದಲ್ಲ, ನಾವಿಬ್ಬರೂ ಅದನ್ನು ಎದುರಿಸಲು ಸಮರ್ಥರಿದ್ದೇವೆ, ಹೀಗಾಗಿ ನೀನು ಧೃತಿಗೆಡಬೇಡ, ನನಗಾದ ಸ್ಥಿತಿ ನಿನಗೆ ಬರುವುದು ಬೇಡ ಎಂದು ಭಾಗ್ಯ, ಲಕ್ಷ್ಮೀಗೆ ಧೈರ್ಯ ತುಂಬುತ್ತಾಳೆ.

ತಾಂಡವ್ ಮತ್ತು ಶ್ರೇಷ್ಠಾ ಮದುವೆಯ ಮೊದಲ ರಾತ್ರಿಗೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಬೆಡ್‌ರೂಮ್ ಅನ್ನು ಸಿಂಗರಿಸಲಾಗಿದೆ. ತಾಂಡವ್ ಮಾತ್ರ ಅಲ್ಲಿ ಟೆನ್ಶನ್ ಮಾಡಿಕೊಂಡು ಕೂತಿದ್ದಾನೆ. ಆಗ ಶ್ರೇಷ್ಠಾ ಅಲ್ಲಿಗೆ, ಗಾಜಿನ ಲೋಟದಲ್ಲಿ ಹಾಲು ಹಿಡಿದುಕೊಂಡು ಬರುತ್ತಾಳೆ. ತಾಂಡವ್ ಕೋಪದಲ್ಲಿ ಇರುವುದನ್ನು ಕಂಡು, ಯಾಕೆ ತಾಂ...