Bengaluru, ಫೆಬ್ರವರಿ 28 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಫೆಬ್ರುವರಿ 27ರ ಸಂಚಿಕೆಯಲ್ಲಿ ತಾಂಡವ್ ಮತ್ತು ಶ್ರೇಷ್ಠಾ, ಆಗಷ್ಟೇ ಮನೆಗೆ ಬಂದಿದ್ದಾರೆ. ಶ್ರೇಷ್ಠಾ ಅಂತೂ ಅತ್ಯಂತ ಸಂತಸ, ಸಂಭ್ರಮದಿಂದ ಮನೆಯಲ್ಲಿ ಇದ್ದು, ಅಂತೂ ಇಂತೂ ಮದುವೆ ಆಯಿತು ಎಂದು ಖುಷಿಪಡುತ್ತಿದ್ದಾಳೆ. ಆದರೆ ತಾಂಡವ್‌ಗೆ ಮಾತ್ರ ಭಾಗ್ಯಾ ದೇವಸ್ಥಾನದಲ್ಲಿ ಆಡಿದ ಮಾತುಗಳು ಇನ್ನೂ ಚುಚ್ಚುತ್ತಿವೆ, ಜತೆಗೆ ಅವಳು ವಾಪಸ್ ಕೊಟ್ಟಿರುವ ತಾಳಿಯೂ ಅವನಿಗೆ ಮನಸ್ಸಿಗೆ ಕಿರಿಕಿರಿ ಅನ್ನಿಸಿದೆ. ಇಬ್ಬರೂ ಹಾಲ್‌ನಲ್ಲಿ ಕುಳಿತಿರುವಾಗಲೇ, ಅಲ್ಲಿ ತಾಂಡವ್ ಮನೆ ಇದೇನಾ ಎಂಬ ಧ್ವನಿ ಕೇಳಿದೆ. ನಂತರ ನೋಡಿದರೆ ಮನೆಗೆ ಭಾಗ್ಯ ತಂಗಿ, ಲಕ್ಷ್ಮೀ ಬಂದಿದ್ದಾಳೆ. ಬಾಗಿಲಿನಿಂದ ನೇರವಾಗಿ ಒಳಗೆ ಬಂದ ಲಕ್ಷ್ಮೀ, ತಾಂಡವ್ ಮತ್ತು ಶ್ರೇಷ್ಠಾ ದಂಪತಿಗೆ ಶುಭ ಹಾರೈಸಿದ್ದಾಳೆ.

ತಾಂಡವ್ ಮತ್ತು ಶ್ರೇಷ್ಠಾ ದಂಪತಿಗೆ ಮದುವೆಯ ಶುಭಕೋರಿದ ಭಾಗ್ಯ ತಂಗಿ ಲಕ್ಷ್ಮೀ, ನಂತರ ದೇವರಕೋಣೆ ಎಲ್ಲಿದೆ ಎಂದು ಕೇಳುತ್ತಾಳೆ. ಬಳಿಕ ಲಕ್ಷ್ಮೀ, ದೇವರ ಕೋಣೆಗೆ ತೆರಳಿ, ಅ...