Bengaluru, ಮಾರ್ಚ್ 21 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 20ರ ಸಂಚಿಕೆಯಲ್ಲಿ ಭಾಗ್ಯ ರೆಸಾರ್ಟ್‌ನ ಕೆಲಸವನ್ನು ಕಳೆದುಕೊಂಡಿದ್ದಾಳೆ. ಮ್ಯಾನೇಜರ್ ಅವಳಿಗೆ ಇನ್ನು ಮುಂದೆ ಕೆಲಸಕ್ಕೆ ಬರುವುದು ಬೇಡ, ಹೊರಟುಹೋಗು ಎಂದು ಎಚ್ಚರಿಸಿದ್ದಾರೆ. ಹೀಗಾಗಿ ಅವಳು ವಿಧಿಯಿಲ್ಲದೇ, ಕೆಲಸ ಬಿಟ್ಟು ವಾಪಸ್ ಬರಬೇಕಾಗಿದೆ. ರೆಸಾರ್ಟ್‌ನಲ್ಲಿ ಸಿಕ್ಕಿದ ಸಂಬಳದ ಸ್ವಲ್ಪ ಹಣವನ್ನು ತೆಗೆದುಕೊಂಡ ಭಾಗ್ಯ, ಅಲ್ಲಿಂದ ಹೊರಡಲು ಅನುವಾಗಿದ್ದಾಳೆ. ಅಷ್ಟರಲ್ಲಿ ತಾಂಡವ್ ಮತ್ತು ಶ್ರೇಷ್ಠಾ ಅವಳಿಗೆ ಎದುರಾಗಿದ್ದಾರೆ. ಅವರಿಬ್ಬರೂ ಸೇರಿಕೊಂಡು ಭಾಗ್ಯಳಿಗೆ ತಮಾಷೆ ಮಾಡಿಕೊಂಡು ನಕ್ಕಿದ್ದಾರೆ.

ಇನ್ನು ಮುಂದೆ ಕೆಲಸವೂ ಇಲ್ಲ, ಹಣವೂ ಇಲ್ಲ, ಮುಂದಿನ ಜೀವನಕ್ಕೆ ಏನು ಮಾಡುತ್ತೀರಿ ಭಾಗ್ಯ ಮೇಡಂ ಎಂದು ತಾಂಡವ್ ಛೇಡಿಸಿದ್ದಾನೆ. ಅಲ್ಲದೆ, ಮುಂದಿನ ಇಎಂಐ ಕಟ್ಟಲೂ ನಿಮ್ಮಿಂದ ಸಾಧ್ಯವಿಲ್ಲ, ಹೀಗಾಗಿ ನೀವೆಲ್ಲ ಬೀದಿಗೆ ಬರುವುದು ಖಂಡಿತಾ ಎಂದು ತಾಂಡವ್ ಮತ್ತು ಶ್ರೇಷ್ಠಾ ಖುಷಿಪಡುತ್ತಾರೆ. ಅದಕ್ಕೆ ಭಾಗ್ಯ, ನಾನು ನಿಮ್ಮ ಬಳಿ ...