Bengaluru, ಮಾರ್ಚ್ 8 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಮಾರ್ಚ್ 7ರ ಸಂಚಿಕೆಯಲ್ಲಿ ಭಾಗ್ಯ ಮನೆಗೆ ಬಂದಿದ್ದಾಳೆ. ಬಳಿಕ ಬ್ಯಾಂಕ್ ಅಧಿಕಾರಿಗಳಿಗೆ ಹಣ ನೀಡಿದ್ದಾಳೆ. ಹಣವನ್ನು ಎಣಿಸಿದ ಅಧಿಕಾರಿಗಳು, ಹಣ ಸರಿಯಾಗಿದೆ, ಮನೆಯನ್ನು ಸೀಝ್ ಮಾಡುವುದಿಲ್ಲ ಎನ್ನುತ್ತಾರೆ. ಒಟ್ಟು 40 ಸಾವಿರ ರೂಪಾಯಿ ಹೊಂದಿಸಿದ ಭಾಗ್ಯ, ಅದನ್ನು ಕೊಟ್ಟು ಮನೆಯ ಸಾಲದ ಕಂತು ಕಟ್ಟಿದ್ದಾಳೆ. ಹೀಗಾಗಿ ಭಾಗ್ಯ ಮತ್ತೊಮ್ಮೆ ಎಲ್ಲರೆದುರು ಗೆಲುವು ಸಾಧಿಸಿ ತೋರಿಸಿದ್ದಾಳೆ. ಅದನ್ನು ಕಂಡು ತಾಂಡವ್ ಮತ್ತು ಶ್ರೇಷ್ಠಾಗೆ ಉರಿದು ಹೋಗಿದೆ. ಅವರು ಭಾಗ್ಯ ಸೋಲುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದರು, ಆದರೆ ಭಾಗ್ಯ ಮಾತ್ರ, ಮನೆಯನ್ನು ಉಳಿಸಿಕೊಳ್ಳುವ ಜತೆಗೆ, ಮನೆಯವರ ಮರ್ಯಾದೆಯನ್ನು ಕೂಡ ಉಳಿಸಿದ್ದಾಳೆ.

ಮನೆಯ ಸಾಲದ ಕಂತು ಕಟ್ಟದೇ ಸತಾಯಿಸಿ, ಭಾಗ್ಯ ಮತ್ತು ಮನೆಯವರಿಗೆ ಕಿರುಕುಳ ನೀಡಿದ ತಾಂಡವ್ ಮತ್ತು ಶ್ರೇಷ್ಠಾ, ಇನ್ನೂ ಮನೆಯಲ್ಲೇ ಇದ್ದಾರೆ. ಅವರು ಬ್ಯಾಂಕ್ ಅಧಿಕಾರಿಗಳಿಗೆ ಮತ್ತೊಮ್ಮೆ ಎಲ್ಲ ಪರಿಶೀಲಿಸಿ, ಹಣ ಸರಿಯಾ...