ಭಾರತ, ಏಪ್ರಿಲ್ 29 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕಿಂತ ಹೆಚ್ಚು ಕೊನೆಯ ಹಂತದಲ್ಲಿ ರೋಚಕತೆ ದುಪ್ಪಟ್ಟಾಗುತ್ತಿದೆ. ಪ್ಲೇಆಫ್​ಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಎಲ್ಲಾ ತಂಡಗಳು ಗೆಲುವಿಗಾಗಿ ಜಿದ್ದಿಗೆ ಬಿದ್ದಿವೆ. ಕೆಲವು ತಂಡಗಳ ಮಧ್ಯೆ ನೇರಾನೇರ ಪೈಪೋಟಿ ಏರ್ಪಟ್ಟಿದ್ದರೆ, ಕೆಲವು ತಂಡಗಳು ಒಂದು ಪಂದ್ಯ ಸೋತರೂ ಪ್ಲೇಆಫ್ ರೇಸ್​​ನಿಂದ ಅಧಿಕೃತವಾಗಿ ಹೊರಬೀಳಲಿವೆ. ಅಂತಹ ತಂಡಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್​​​ ಕೂಡ ಒಂದು. ಇದೀಗ ಅಗ್ರ-4ರಲ್ಲಿ ಸ್ಥಾನ ಪಡೆಯುವ ಉತ್ಸುಕದಲ್ಲಿರುವ ಪಂಜಾಬ್ ಕಿಂಗ್ಸ್ ಸವಾಲಿಗೆ ಸತತ‌ ಸೋಲುಗಳಿಂದ ಕಂಗೆಟ್ಟಿರುವ ಎಂಎಸ್ ಧೋನಿ ನೇತೃತ್ವದ ತಂಡ ಸಜ್ಜಾಗಿದೆ. ಆದರೆ ತವರಿನಲ್ಲಿ ಸತತ ನಾಲ್ಕು ಸೋತಿದ್ದು, ಸಿಎಸ್​ಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಪಂಜಾಬ್ ಮತ್ತು ಚೆನ್ನೈ ನಡುವಿನ ಐಪಿಎಲ್ 49ನೇ ಪಂದ್ಯಕ್ಕೆ ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನ ಸಜ್ಜಾಗಿದೆ. ಪ್ರಸಕ್ತ ಲೀಗ್​ನಲ್ಲಿ ಏಪ್ರಿಲ್ 8ರಂದು ಐಪಿಎಲ್​ನ 22ನೇ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯ...