ಭಾರತ, ಏಪ್ರಿಲ್ 19 -- ಹೊರಗಡೆ ಹುಲಿ, ತವರಲ್ಲಿ ಬೆಕ್ಕು... ಈ ಮಾತು ಆರ್‌ಸಿಬಿ ತಂಡಕ್ಕೆ ಸರಿಯಾಗಿ ಹೊಂದಿಕೆಯಾಗುವಂತಿದೆ. ಐಪಿಎಲ್‌ 18ನೇ ಆವೃತ್ತಿಯಲ್ಲಿ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಈವರೆಗ ಆಡಿದ ಮೂರೂ ಪಂದ್ಯಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮುಗ್ಗರಿಸಿದೆ. ತವರಿನ ಹೊರಗೆ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ಸುಲಭವಾಗಿ ಗೆದ್ದಿರುವ ಆರ್‌ಸಿಬಿಗೆ ತವರಿನಲ್ಲಿ ಇನ್ನೂ ಒಂದು ಪಂದ್ಯವೂ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಹೊಸ ಸರ್ಪಡೆಯೇ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಸೋಲು. ಮಳೆಯಿಂದ 14 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ತವರಿನಲ್ಲಿ ಟಾಸ್‌ ಸೋತು ಸತತ ಮೂರನೇ ಪಂದ್ಯದಲ್ಲಿಯೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮತ್ತೊಮ್ಮೆ ತವರಿನ ಸಾವಿರಾರು ಅಭಿಮಾನಿಗಳ ಮುಂದೆ ಅಬ್ಬರಿಸುವುದನ್ನು ಮರೆತಿತು. ಹೀಗಾಗಿ ಕೇವಲ 95 ರನ್‌ ಮಾತ್ರ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಪಂಜಾಬ್‌ ತಂಡ, ಕೇವಲ 12.1 ಓವರ್‌ಗ...