ಭಾರತ, ಏಪ್ರಿಲ್ 2 -- ನವದೆಹಲಿ: ಮುಂಬರುವ 2025-26 ಆವೃತ್ತಿಯ ತವರು ಪಂದ್ಯಗಳ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬುಧವಾರ (ಏಪ್ರಿಲ್ 2) ಪ್ರಕಟಿಸಿದೆ. ಅಕ್ಟೋಬರ್​ನಿಂದ ತವರಿನ ಪಂದ್ಯಗಳು ಆರಂಭವಾಗಲಿವೆ. ಟೀಮ್ ಇಂಡಿಯಾ (ಪುರುಷರ ಹಿರಿಯರ ತಂಡ) ಟೆಸ್ಟ್ ಪಂದ್ಯಗಳು, ಏಕದಿನ, (ODI) ಮತ್ತು ಟಿ20 (T20I) ಪಂದ್ಯಗಳು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

ಮುಂಬರುವ ದಿನಗಳಲ್ಲಿ ಭಾರತ ತಂಡವು ತವರಿನಲ್ಲಿ ಒಟ್ಟು 12 ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ 10 ಪಂದ್ಯಗಳನ್ನು ಆಡಲಿರುವ ಭಾರತ, ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಈ ಟೆಸ್ಟ್ ಸರಣಿ ಅಕ್ಟೋಬರ್ 2, 2025 ರಿಂದ ಪ್ರಾರಂಭವಾಗಲಿದ್ದು, ಅಹ್ಮದಾಬಾದ್​​ನಲ್ಲಿ ಪಂದ್ಯ ನಡೆಯಲಿದೆ. 2ನೇ ಟೆಸ್ಟ್ ಅಕ್ಟೋಬರ್ 10ರಿಂದ ಕೋಲ್ಕತ್ತಾದಲ್ಲಿ ನಡೆಯಲಿದೆ.

ಇದಾದ ಬಳಿಕ ನವೆಂಬರ್​​ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಸರಣಿ ಪ್ರಾರಂಭವಾಗಲಿದೆ. ಆಫ್ರಿಕಾ ವಿರುದ್...