ಭಾರತ, ಮಾರ್ಚ್ 14 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 12ರ ಸಂಚಿಕೆಯಲ್ಲಿ ಪ್ರೆಸ್‌ಮೀಟ್‌ಗೆ ಹೊರಟ ಲಲಿತಾದೇವಿಯವರನ್ನು ಆಟೊದಲ್ಲಿ ಹತ್ತಿಸಿಕೊಂಡು ಹೊರಟ ಪದ್ಮನಾಭರನ್ನ ರೌಡಿಗಳು ಹಿಂಬಾಲಿಸುತ್ತಾರೆ. ವೇಗವಾಗಿ ಆಟೊ ಓಡಿಸಿದ್ರು ಬಂದು ಓವರ್‌ ಟೇಕ್ ಮಾಡಿ, ಆಟೊಗೆ ಗಾಡಿ ಅಡ್ಡ ನಿಲ್ಲಿಸುತ್ತಾರೆ ರೌಡಿಗಳು. ಇತ್ತ ಮದನ್ ಹಾಗೂ ವಿಜಯಾಂಬಿಕಾ ರೌಡಿಗಳ ಜೊತೆ ಆಟೊದವನನ್ನು ಮುಗಿಸಿ ಎಂದು ರೌಡಿಗಳಿಗೆ ವಾರ್ನಿಂಗ್ ಕೊಟ್ಟಿರುತ್ತಾರೆ. ಆದರೆ ಅಲ್ಲಿ ನಡಿಯೋದೇ ಬೇರೆ. ಆಟೊದಿಂದ ರಾಡ್ ಒಂದನ್ನು ತೆಗೆಯುವ ಪದ್ಮನಾಭ ರೌಡಿಗಳ ಜೊತೆ ಫೈಟ್ ಮಾಡಿ, ಅವರು ಲಲಿತಾದೇವಿ ಹತ್ತಿರ ಕೂಡ ಬರದಂತೆ ನೋಡಿಕೊಳ್ಳುತ್ತಾರೆ, ಮಾತ್ರವಲ್ಲ ರಾಡ್‌ನಿಂದ ಹೊಡೆದು ರೌಡಿಗಳು ನೆಲ ಕಚ್ಚುವಂತೆ ಮಾಡುತ್ತಾರೆ. ಲಲಿತಾದೇವಿಯವರನ್ನು ಬೇರೆ ಆಟೊದಲ್ಲಿ ಕಳುಹಿಸುವ ಪದ್ಮನಾಭ ರೌಡಿಗಳಿಗೆ ಫೋನ್ ಮಾಡಿದ ಮದನ್, ವಿಜಯಾಂಬಿಕಾಗೆ ಕಡಕ್ ವಾರ್ನಿಂಗ್ ಕೊಡ್ತಾರೆ. 'ಈ ಬಂಟ ಇರುವವರೆಗೂ ಲಲಿತಾದೇವಿಯವರ ಉಗುರು ಸೋಕಲು ಯಾರಿಂದಲ...