ಭಾರತ, ಜನವರಿ 30 -- ಪ್ರತಿಯೊಬ್ಬರೂ ಚರ್ಮದ ಕಾಳಜಿ ಮಾತ್ರವಲ್ಲ ತಮ್ಮ ತಲೆಗೂದಲಿನ ಆರೈಕೆಯತ್ತಲೂ ಗಮನ ಕೊಡುತ್ತಾರೆ. ಆದರೂ ಕೆಲವೊಮ್ಮೆ ತೋರುವ ನಿರ್ಲಕ್ಷ್ಯವು ಹೆಚ್ಚು ಕೂದಲು ಉದುರುವಿಕೆ, ತಲೆಹೊಟ್ಟು ಸೇರಿದಂತೆ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಕೂದಲನ್ನು ಸುಂದರವಾಗಿ ಮತ್ತು ಆರೋಗ್ಯಕರವಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಕೂದಲಿನ ಆರೋಗ್ಯಕ್ಕಾಗಿ ನಿಯತವಾಗಿ ತಲೆಗೂದಲನ್ನು ತೊಳೆಯುವುದು ಅತ್ಯಗತ್ಯ. ಕೂದಲು ಸ್ವಚ್ಛವಾದಷ್ಟೂ ಉತ್ತಮ ಬೆಳವಣಿಗೆ, ಮೃದು, ಪ್ರಕಾಶಮಾನ ಮತ್ತು ಆರೋಗ್ಯಕರವಾಗಿರುತ್ತದೆ.

ಆದರೆ, ಅನೇಕ ಮಂದಿ ತಮ್ಮ ಕೂದಲನ್ನು ತೊಳೆಯುವಾಗ ಗೊತ್ತಿಲ್ಲದೆ ಕೆಲವು ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ನಿಮ್ಮ ಕೂದಲಿನ ಕಿರುಚೀಲಗಳನ್ನು ದುರ್ಬಲಗೊಳಿಸುತ್ತದೆ. ಕೂದಲು ಉದುರುವಿಕೆ, ಶುಷ್ಕತೆ, ತಲೆಹೊಟ್ಟು, ತುರಿಕೆ, ದದ್ದುಗಳಂತಹ ಸಮಸ್ಯೆಗಳು ಸಹ ಸಂಭವಿಸಬಹುದು. ಆದ್ದರಿಂದ ತಲೆ ಸ್ನಾನ ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಬೇಡಿ.

ಪ್ರತಿದಿನ...