ಭಾರತ, ಮಾರ್ಚ್ 6 -- ಚಾಂಪಿಯನ್ಸ್ ಟ್ರೋಫಿಯ 2ನೇ ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವಿನ ಶತಕ ದಾಖಲಿಸಿದ ನ್ಯೂಜಿಲೆಂಡ್ ಬ್ಯಾಟರ್​ಗಳಾದ ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್​ ದಾಖಲೆ ನಿರ್ಮಿಸಿದ್ದಾರೆ.

ಮೊದಲಿಗೆ ರಚಿನ್ ರವೀಂದ್ರ ದಾಖಲೆ ನೋಡುವುದಾದರೆ... 101 ಎಸೆತಗಳಲ್ಲಿ 13 ಬೌಂಡರಿ, 1 ಸಿಕ್ಸರ್ ಸಹಿತ 108 ರನ್ ಗಳಿಸಿದ ರಚಿನ್, ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 5 ಶತಕ ಬಾರಿಸಿ ಶಿಖರ್ ಧವನ್ ದಾಖಲೆ ಮುರಿದಿದ್ದಾರೆ. ಐಸಿಸಿ ಏಕದಿನ ಟೂರ್ನಿಗಳಲ್ಲಿ ಧವನ್ 15 ಇನ್ನಿಂಗ್ಸ್​​ಗಳಲ್ಲಿ 5 ಶತಕ ಗಳಿಸಿದರೆ, ರಚಿನ್ 13 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಜೊತೆಗೆ ಈ ಸಾಧನೆಗೈದ ಅತಿ ಕಿರಿಯ ಆಟಗಾರ (25 ವರ್ಷ) ಎಂಬ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ ಬೆಂಗಳೂರು ಮೂಲದ ಆಟಗಾರ. ಏಕದಿನದಲ್ಲಿ ಅತಿ ಕಡಿಮೆ ಇನ್ನಿಂಗ್ಸ್​​ಗಳಲ್ಲಿ 5 ಶತಕ ಬಾರಿಸಿದ ನ್ಯೂಜಿಲೆಂಡ್​ನ 2ನೇ ಬ್ಯಾಟರ್​ ಕೂಡ ಹೌದು.

ಏಕದಿನ ವಿಶ್ವಕ...