ಭಾರತ, ಫೆಬ್ರವರಿ 24 -- Virat Kohli: ವಿರಾಟ್ ಕೊಹ್ಲಿ ಜಪ ಇನ್ನೂ ಮುಗಿದಿಲ್ಲ. ಎಲ್ಲೆಲ್ಲೂ ಅವರದ್ದೇ ನಾಮಜಪ. ಪಾಕಿಸ್ತಾನ ವಿರುದ್ಧ ಈ ಅವಿಸ್ಮರಣೀಯ ಸೆಂಚುರಿ ಬಂದದ್ದು ಖುಷಿಯನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಅವರ ಶತಕವನ್ನು ಹಬ್ಬದ ರೀತಿ ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ವಿಶ್ವದಾದ್ಯಂತ ಪಸರಿಸಿದೆ. ಇದಕ್ಕೆ ಪಾಕಿಸ್ತಾನ ದೇಶವೂ ಹೊರತಾಗಿಲ್ಲ. ತಮ್ಮ ದೇಶ ಸೋತಿದ್ದನ್ನೂ ಮರೆತು ಕೊಹ್ಲಿ ಶತಕ ಸಂಭ್ರಮಿಸಿದ ಪಾಕಿಸ್ತಾನದ ಅಭಿಮಾನಿಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪಾಕಿಸ್ತಾನ ತಂಡವನ್ನು 6 ವಿಕೆಟ್​ಗಳಿಂದ ಬಗ್ಗುಬಡಿದ ಟೀಮ್ ಇಂಡಿಯಾ ಸೆಮಿಫೈನಲ್ ಸನಿಹಕ್ಕೆ ಬಂದು ನಿಂತಿದೆ. ಮತ್ತೊಂದೆಡೆ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿರುವ ಪಾಕಿಸ್ತಾನ ಸೋತು ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ದುಬೈನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕ್, ಸೌದ್ ಶಕೀಲ್ (62) ಮತ್ತು ಮೊಹಮ್ಮದ್ ರಿಜ್ವಾನ್ (46) 49.4 ಓವರ್​​​​ಗಳಲ್...