Bengaluru, ಏಪ್ರಿಲ್ 5 -- MP Shankar: ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿ ಮಾತ್ರವಲ್ಲದೆ, ನಿರ್ಮಾಪಕರಾಗಿಯೂ ಕನ್ನಡಕ್ಕೆ ಸಾಕಷ್ಟು ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದವರು ನಟ ಎಂ.ಪಿ ಶಂಕರ್‌. ಕನ್ನಡ ಚಿತ್ರೋದ್ಯಮದಲ್ಲಿ ಯಾರೂ ಮಾಡದ ಒಂದಷ್ಟು ದಾಖಲೆಗಳು ಇವರ ಹೆಸರಿನಲ್ಲಿವೆ. ಗೆಲುವನ್ನು ಅನುಭವಿಸಿದಷ್ಟೇ ಸೋಲನ್ನೂ ಎದುರಿಸಿದ್ದಾರೆ. ಸಿನಿಮಾಗಳು ಗೆದ್ದಾಗ ಲಕ್ಷ ಲಕ್ಷ ಹಣ ಎಣಿಸಿಕೊಂಡವರು, ಸೋತಾಗ ಸಾಲ ತೀರಿಸಲು ಮನೆ ಮಠ ಮಾರಿಕೊಂಡ ಉದಾಹರಣೆಯೂ ಇದೆ. ಇದು ಒಂದು ಕಡೆಯ ನೋವಾದರೆ, ತಮ್ಮ ಆ ಒಂದು ತಪ್ಪು ನಿರ್ಧಾರದಿಂದ ಹೆತ್ತ ಮಗನನ್ನೇ ಕಳೆದುಕೊಂಡರು ಎಂ. ಪಿ ಶಂಕರ್‌.

ಕನ್ನಡ ಚಿತ್ರರಂಗಕ್ಕೆ ಎಂಪಿ ಶಂಕರ್‌ ಒಂದು ಮುತ್ತು! ಅಷ್ಟು ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜತೆಗೆ ನಿರ್ಮಾಣದಲ್ಲಿಯೂ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಗಂಧದ ಗುಡಿ ಚಿತ್ರ ನಿರ್ಮಿಸಿದರೆ, ಭೂತಯ್ಯನ ಮಗ ಅಯ್ಯು ಅನ್ನೋ ಕ್ಲಾಸಿಕ್‌ ಸಿನಿಮಾದಲ್ಲಿ ಭೂತಯ್ಯನಾಗಿ ಇಂದಿಗೂ ಚಿರಸ್ಥಾಯಿಯಾಗಿ ನೆನಪಿನಲ್ಲಿ ಉಳಿದಿದ್ದಾರೆ. ʻನ...