ಭಾರತ, ಮಾರ್ಚ್ 24 -- ಇಶಾನ್ ಕಿಶನ್ ಪಾಲಿಗೆ 2024 ಕಹಿ ವರ್ಷ. ವರ್ಷದ ಹಿಂದೆ ಟೀಮ್‌ ಇಂಡಿಯಾ ಕಾಯಂ ಸದಸ್ಯನಾಗಿದ್ದ ಕಿಶನ್‌, ದಿಢೀರ್‌ ಭಾರತ ತಂಡದಿಂದ ಕಣ್ಮರೆಯಾದರು. 26 ವರ್ಷದ ಆಟಗಾರ ಮತ್ತೆ ಟೀಮ್‌ ಇಂಡಿಯಾ ಕಂಬ್ಯಾಕ್‌ ಎದುರು ನೋಡುತ್ತಿದ್ದರು. ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ಐಪಿಎಲ್‌ ಆರಂಭದೊಂದಿಗೆ ಇಶಾನ್‌ ಕಿಶನ್‌ ಹೊಸ ಯುಗ ಆರಂಭಿಸಿದ್ದಾರೆ. ಭಾನುವಾರ (ಮಾ. 23) ನಡೆದ ಐಪಿಎಲ್‌ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್‌ ಆಡಿತು. ಎಸ್‌ಆರ್‌ಎಚ್‌ ಪರ ಪದಾರ್ಪಣೆ ಪಂದ್ಯದಲ್ಲೇ ಕಿಶನ್‌ ಶತಕ ಬಾರಿಸಿ ಮಿಂಚಿದರು. ಕೇವಲ 45 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಸಂಭ್ರಮಿಸಿದರು.

ಕಿಶನ್‌ ಪಾಲಿಗೆ ಈ ಶತಕ ಅನಿವಾರ್ಯವಾಗಿತ್ತು. ಟೀಮ್‌ ಇಂಡಿಯಾಗೆ ಮತ್ತೆ ಕಂಬ್ಯಾಕ್‌ ಮಾಡಲು ಕಾಯುತ್ತಿದ್ದ ಯುವ ಬ್ಯಾಟರ್‌, ಒಂದೊಳ್ಳೆ ಇನ್ನಿಂಗ್ಸ್‌ ಎದುರು ನೋಡುತ್ತಿದ್ದರು. ಐಪಿಎಲ್‌ನ ಮೊದಲ ಪಂದ್ಯದಲ್ಲೇ ಅವರ ಆತ್ಮವಿಶ್ವಾಸ ಹೆಚ್ಚಿದೆ. ಪಂದ್ಯದ ಬಳಿಕ ಮಾತನಾಡಿದ ಕಿಶನ್‌, "ಆಡುವ ಮುನ್ನ ಆತಂಕವಿತ್ತು. ನಾಯಕ...