ಭಾರತ, ಮಾರ್ಚ್ 14 -- Rupee symbol: ತಮಿಳುನಾಡು ಬಜೆಟ್‌ ಪುಸ್ತಕದ ಲಾಂಛನದಲ್ಲಿ ರೂಪಾಯಿ ಸಂಕೇತ ತಮಿಳಿಗೆ ಬದಲಾಯಿಸಿದ ಅಲ್ಲಿನ ಸರ್ಕಾರದ ಕ್ರಮ ಟೀಕೆಗೆ ಗುರಿಯಾಗಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ವಿರುದ್ಧ ದ್ವಿಭಾಷಾ ಸೂತ್ರವನ್ನೇ ಪ್ರತಿಪಾದಿಸುತ್ತಿರುವ ತಮಿಳುನಾಡು ಸರ್ಕಾರ ಈ ಸಲದ ಬಜೆಟ್‌ನಲ್ಲಿ ದೇವನಾಗರಿ ಲಿಪಿಯ ರೂಪಾಯಿ ಸಂಕೇತವನ್ನು ತಮಿಳು ಭಾಷೆಯ ರು ಅಕ್ಷರಕ್ಕೆ ಬದಲಾಯಿಸಿದ್ದು ಈಗ ವಿವಾದಕ್ಕೀಡಾಗಿದೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ರೂಪಾಯಿ ಸಂಕೇತ ವಿನ್ಯಾಸಕಾರ, ತಮಿಳುನಾಡಿನವರೇ ಆದ ಉದಯ ಕುಮಾರ್ ಧರ್ಮಲಿಂಗಂ, 'ವರ್ಷಗಳ ಬಳಿಕ ಇಂಥದ್ದೊಂದು ಚರ್ಚೆಯನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. ಉದಯ ಕುಮಾರ್ ಧರ್ಮಲಿಂಗಂ ಗುವಾಹಟಿ ಐಐಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈಗಾಗಲೇ ಚಾಲ್ತಿಯಲ್ಲಿರುವ ಅಧಿಕೃತ ರೂಪಾಯಿ ಸಂಕೇತ ವಿನ್ಯಾಸಕಾರ ಉದಯ ಕುಮಾರ್ ಧರ್ಮಲಿಂಗಂ ಕೂಡ ತಮಿಳುನಾಡಿನವರೇ ಆಗಿದ್ದು, ಸದ್ಯ ಗುವಾಹಟಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ...