ಭಾರತ, ಮಾರ್ಚ್ 14 -- ತಮಿಳನಾಡು ಬಜೆಟ್‌ 2025-26ರ ಪುಸ್ತಕದಲ್ಲಿ ಭಾರತದ ಅಧಿಕೃತ ರೂಪಾಯಿ ಚಿಹ್ನೆಯ ಜಾಗದಲ್ಲಿ ತಮಿಳು ಅಕ್ಷರ ರು ವನ್ನು ಬಳಸಿದೆ. ವಾಸ್ತವದಲ್ಲಿ ಭಾರತದ ಅಧಿಕೃತ ರೂಪಾಯಿ ಚಿ್ಹ್ನೆ ಹಿಂದೆ ತತ್ತ್ವಶಾಸ್ತ್ರ ಅಂಶಗಳಿವೆ. ಅದರ ಗಾತ್ರ, ಅದರಲ್ಲಿರುವ ಸಂಕೇತಗಳು ನೀಡುವ ಸಂದೇಶ ಮುಂತಾದವು ಅಡಕವಾಗಿದೆ.ಅವುಗಳ ಕಡೆಗ ಗಮನಹರಿಸೋಣ

ರೂಪಾಯಿಯ ತಲೆ ಮೇಲಿನ ಗೆರೆ (ಶಿರೋ ರೇಖೆ): ದೇವನಾಗರಿ ಲಿಪಿಯ ವಿಶೇಷ ಅಂಶ ಇದು. ದೇವನಾಗರಿ ಲಿಪಿಯ ಅಕ್ಷರಗಳು ತಳಕ್ಕೆ ಮುಟ್ಟಲ್ಲ. ಜಗತ್ತಿನ ಯಾವುದೇ ಭಾಷೆಯ ಲಿಪಿಗೂ ಈ ವಿಶೇಷ ಅಂಶವಿಲ್ಲ.

ತಿರಂಗಾದ ಸಂಕೇತ ಈ ಚಿಹ್ನೆ: ರೂಪಾಯಿ ಚಿಹ್ನೆಯಲ್ಲಿ ಕಂಡು ಬರುವ ಶಿರೋ ರೇಖೆಗೆ ಸಮಾನಂತರವಾಗಿ ಇನ್ನೊಂದು ರೇಖೆ ಬರುತ್ತದೆ. ಅದು ಸೇರಿದಾಗ ರೂಪಾಯಿ ಚಿಹ್ನೆಯ ವರ್ಣವು ಭಾರತದ ರಾಷ್ಟ್ರಧ್ವಜ ತಿರಂಗಾವನ್ನು ಪ್ರತಿನಿಧಿಸುತ್ತದೆ. ಶಿರೋ ರೇಖೆ ಕೇಸರಿ ವರ್ಣದಲ್ಲಿದ್ದರೆ,ಅದಕ್ಕೆ ಕೆಳಗೆ ಸಮಾನಂತರದಲ್ಲಿರುವ ರೇಖೆ ಹಸಿರು ವರ್ಣದಲ್ಲಿದೆ.

ಸಮ ಚಿಹ್ನೆ: ರೂಪಾಯಿ ಚಿಹ್ನೆಯಲ್ಲಿ ಶಿರೋ ರೇಖೆ ಮತ್ತು ಅದಕ್...