Bengaluru, ಜನವರಿ 27 -- ಗಣೇಶನನ್ನು ವಿಘ್ನ ನಿವಾರಕ ಎಂದು ಕರೆಯುತ್ತೇವೆ. ಗಣೇಶನ ಆರಾಧನೆಯಿಂದ ಅಡೆತಡೆಗಳು ದೂರವಾಗುತ್ತವೆ ಮತ್ತು ನಾವು ಅಂದುಕೊಂಡ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ. ಪ್ರಥಮ ಪೂಜೆಗೆ ಅಧಿಪತಿ ಗಣೇಶನಿಗೆ ಏಕದಂತ, ಲಂಬೋದರ, ಬೆನಕ ಸೇರಿದಂತೆ ಅನೇಕ ಹೆಸರುಗಳಿವೆ. ಪಾರ್ವತಿ ಪರಮೇಶ್ವರನ ಪುತ್ರ ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು ದೂರವಾಗಿ ಸಂತೋಷ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಗಣೇಶನಿಗೆ ಆನೆ ತಲೆ ಬಂದಿದ್ದು ಏಕೆ ಎಂಬ ಕಥೆ ಬಹುತೇಕ ಎಲ್ಲರಿಗೂ ಗೊತ್ತು. ಪುರಾಣಗಳ ಪ್ರಕಾರ, ಶಿವನು ಧ್ಯಾನದಲ್ಲಿರುವಾಗ ಪಾರ್ವತಿ ದೇವಿಯು ವಿನಾಯಕನನ್ನು ಸೃಷ್ಟಿಸಿ ಜೀವ ನೀಡುತ್ತಾಳೆ. ಪಾರ್ವತಿ ದೇವಿ ಸ್ನಾನಕ್ಕೆ ಹೋಗುವಾಗ ಗಣೇಶ, ಬಾಗಿಲಲ್ಲಿ ಕಾಯುತ್ತಿರುತ್ತಾನೆ. ಆ ಸಮಯದಲ್ಲಿ ಶಿವನು ಅಲ್ಲಿಗೆ ಬಂದು ಒಳಗೆ ಹೋಗಲು ಪ್ರಯತ್ನಿಸುತ್ತಾನೆ. ಆದರೆ ಶಂಕರನನ್ನು ಗಣೇಶ ತಡೆಯುತ್ತಾನೆ. ಅವನು ಪಾರ್ವತಿ ಸೃಷ್ಟಿಸಿದ ತಮ್ಮ ಮಗ ಎಂದು ತಿಳಿಯದೆ ಶಿವ ಕೋಪಗೊಳ್ಳುತ್ತಾನೆ. ಗಣೇಶನ ತಲೆಯನ್ನು ಬೇರ...