Chennai, ಏಪ್ರಿಲ್ 3 -- Ooty Kodaikanal E Pass: ತಮಿಳುನಾಡಿನ ಪ್ರಮುಖ ಕೂಲ್‌ ಕೂಲ್‌ ಪ್ರವಾಸಿ ತಾಣಗಳು, ಬೇಸಿಗೆಯಲ್ಲಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಊಟಿ ಹಾಗೂ ಕೊಡೈಕೆನಾಲ್‌ ಏಪ್ರಿಲ್‌, ಮೇ ಹಾಗೂ ಜೂನ್‌ ತಿಂಗಳಲ್ಲಿ ಪ್ರವಾಸ ಹೋಗಲು ಬಯಸಿದವರು ಇದನ್ನು ಕಡ್ಡಾಯವಾಗಿ ಗಮನಿಸಿ. ಸ್ವಂತ ವಾಹನದಲ್ಲಿ ಈ ಎರಡೂ ಪ್ರವಾಸಿ ತಾಣಗಳಿಗೆ ಹೊರಟಿದ್ದರೆ ಹಿಂದಿನ ವರ್ಷಗಳಂತೆ ಈ ಬಾರಿಯೂ ಇ ಪಾಸ್‌ ಅನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಇ ಪಾಸ್‌ ಇಲ್ಲದೇ ಇದ್ದರೆ ಈ ಎರಡು ತಾಣಗಳಿಗೆ ಸ್ವಂತ ವಾಹನಗಳ ಪ್ರವೇಶಕ್ಕೆ ಅವಕಾಶವಿಲ್ಲ. ಮದ್ರಾಸ್‌ ಹೈಕೋರ್ಟ್‌ ಈ ಎರಡು ತಾಣಗಳಿಗೆ ಪ್ರತಿ ದಿನ ಹಾಗೂ ವಾರಾಂತ್ಯ ದಿನಗಳಿಗೆ ಇಂತಿಷ್ಟು ಇ ಪಾಸ್‌ ಅನ್ನು ನಿಗದಿ ಮಾಡಿದೆ. ನಿಗದಿತ ದಿನದ ಪ್ರವಾಸಕ್ಕೆ ಹೊರಡುವವರು ಈ ಪಾಸ್‌ ಅನ್ನು ಆನ್‌ಲೈನ್‌ ಮೂಲಕ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

Published by HT Digital Content Services with permission from HT Kannada....