ಭಾರತ, ಏಪ್ರಿಲ್ 8 -- ವೀರಕಪುತ್ರ ಶ್ರೀನಿವಾಸ ಬರಹ: ಅವನೊಬ್ಬ ದೇಶಪ್ರೇಮಿ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದವನು. ಅಮೇರಿಕಾದಲ್ಲಿಯೇ ನೂರೆಂಟು ಅವಕಾಶಗಳಿದ್ದರೂ ತನ್ನ ಪ್ರತಿಭೆ ನನ್ನ ದೇಶಕ್ಕೆ ಮಾತ್ರ ಅಂತ ನಿರ್ಧರಿಸಿ ಭಾರತಕ್ಕೆ ಬಂದುಬಿಡುತ್ತಾನೆ. ಇಡೀ ದೇಶದ ದಿಕ್ಕನ್ನೇ ಬದಲಿಸಿಬಲ್ಲಂತಹ ಸಂಶೋಧನೆಯೊಂದನ್ನು ಮಾಡುತ್ತಾನೆ. ಆದರೆ ಆ ಯೋಜನೆ ಅನುಮತಿಗೆ ಅವನು ಪಡಬಾರದ ಕಷ್ಟ ಪಡಬೇಕಾಗುತ್ತದೆ. ಅಧಿಕಾರಿಗಳು ಐವತ್ತು ಲಕ್ಷ ಲಂಚ ಕೇಳ್ತಾರೆ! ಇವನು ಬಡ್ಡಿಗೆ ತಂದು ಕೊಡ್ತಾನೆ. ಮುಂದುವರಿದ ಅಧಿಕಾರಿಗಳು ಅದು ಸಾಕಾಗಲ್ಲ ಇನ್ನೂ ಐದು ಕೋಟಿ ಬೇಕು ಅನ್ನೋ ಡಿಮ್ಯಾಂಡ್ ಮುಂದಿಡುತ್ತಾರೆ! ಇವನಿಗೆ ನಿಂತ ನೆಲ ಕುಸಿದ ಅನುಭವ. ಅದರ ಮಧ್ಯೆ ಅವನ ಹೆಂಡತಿಯದ್ದೊಂದು ಕಹಾನಿ. ಆಕೆಗೆ ತಾನು ತಾಯಿಯಾಗಬೇಕು ಎಂಬಾಸೆ. ವಿಪರೀತ ಕುಡಿತದ ಕಾರಣಕ್ಕೆ ಗಂಡನಿಂದ ಅಮ್ಮನಾಗುವುದು ಸಾಧ‌್ಯವಿಲ್ಲ ಅಂತ ರಿಪೋರ್ಟ್ ಹೇಳುತ್ತಿದೆ. ಆದರೆ ಸಮಾಜ ಮಾತ್ರ ನನ್ನನ್ನೇ ಬಂಜೆ ಮಾಡಿ ರಿಪೋರ್ಟ್ ಕೊಡುತ್ತಿದೆ. ಆದ್ದರಿಂದ ನಾನು ತಾಯಿ...