ಭಾರತ, ಮೇ 27 -- ಕನ್ನಡ ಭಾಷೆ ಹುಟ್ಟಿಗೆ ತಮಿಳು ಕಾರಣ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹಿರಿಯ ನಟ ಕಮಲ್‌ ಹಾಸನ್‌ ಆಡಿದ ಮಾತು ಇದೀಗ ಕನ್ನಡಿಗರನ್ನು ಕೆಣಕಿದೆ. ʻಥಗ್‌ ಲೈಫ್‌ʼ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌ ಅವರ ಮುಂದೆಯೇ ಈ ಮಾತನ್ನು ಹೇಳಿದ್ದಾರೆ ಕಮಲ್‌ ಹಾಸನ್‌. ಸದ್ಯ ಕಮಲ್‌ ಅವರ ಈ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಕಾಲಿವುಡ್‌ನ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ʻಥಗ್‌ ಲೈಫ್‌ʼ ಸಿನಿಮಾ ಇನ್ನೇನು, ಜೂನ್‌ 5ರಂದು ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ಚೆನ್ನೈನಲ್ಲಿ ಅದ್ಧೂರಿಯಾಗಿ ಈ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಅತಿಥಿಯಾಗಿ ಆಗಮಿಸಿದ್ದರು. ಅವರ ಮುಂದೆಯೇ, ʻಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದುʼ ಎಂದು ಹೇಳಿದ್ದಾರೆ.

ತಮಿಳುನಾಡಿಗೆ ಬಂದ ಶಿವರಾಜ್‌ಕುಮಾರ್‌ ಅವರನ್ನು ಸ್ವಾಗತಿಸಿದ ಕಮಲ್‌ ಹಾಸನ್‌, ಕನ್ನಡಿಗರ ಪ್ರೀತಿ ಮತ್ತು ಗೌರವಾದರಗಳಿಗೆ ನಮಿಸುತ್ತ ಮಾತನಾಡಿ...