ಭಾರತ, ಮಾರ್ಚ್ 3 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಸರಿಯಾಗಿ ನಿರ್ವಹಣೆ ಮಾಡದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಟೀಕೆಗೆ ಗುರಿಯಾಗಿದೆ. ಟೀಕೆ ಮಾಡಿದವರ ಸಾಲಿಗೆ ವೆಸ್ಟ್ ಇಂಡೀಸ್ ದಿಗ್ಗಜ ವಿವಿಯನ್ ರಿಚರ್ಡ್ಸ್ ಕೂಡ ಸೇರಿದ್ದಾರೆ. ಭಾರತ-ನ್ಯೂಜಿಲೆಂಡ್ ನಡುವಿನ ಕೊನೆಯ ಲೀಗ್​ ಪಂದ್ಯಕ್ಕೂ ಮುನ್ನ ಸೌತ್ ಆಫ್ರಿಕಾ-ಆಸ್ಟ್ರೇಲಿಯಾ ತಂಡಗಳು ದುಬೈಗೆ ಬಂದಿದ್ದು ಆಕ್ರೋಶಕ್ಕೆ ಕಾರಣವಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ಪೈಕಿ ಒಂದು ಭಾರತ ತಂಡದ ವಿರುದ್ಧ ಸೆಮಿಫೈನಲ್​ ಆಡಬೇಕಿತ್ತು. ಆದರೆ ಇಂಡೋ-ಕಿವೀಸ್ ಪಂದ್ಯಕ್ಕೂ ಮುನ್ನ ಇದಿನ್ನೂ ಅಂತಿಮಗೊಂಡಿರಲಿಲ್ಲ. ಪಂದ್ಯಕ್ಕೂ ಮೊದಲು ಭಾರತ ಗೆದ್ದರೆ ಆಸ್ಟ್ರೇಲಿಯಾ ವಿರುದ್ಧ, ಸೋತರೆ ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಲೆಕ್ಕಾಚಾರ ಇತ್ತು. ಯಾವ ತಂಡವು ಖಚಿತ ಆಗದ ಕಾರಣ ಉಭಯ ತಂಡಗಳು ದುಬೈಗೆ ಪ್ರಯಾಣಿಸಿದ್ದವು.

ಒಂದು ವೇಳೆ ಪಾಕಿಸ್ತಾನದಲ್ಲೇ ಉಳಿದಿದ್ದರೆ, ಭಾರತದ ವಿರುದ್ಧ ಸೆಣಸಾಟ ನಡೆಸುವ ತಂಡವು ತರಾತುರಿಯಲ್ಲಿ ಬರ...