Bengaluru, ಫೆಬ್ರವರಿ 13 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಫೆಬ್ರುವರಿ 12ರ ಸಂಚಿಕೆಯಲ್ಲಿ ಕನ್ನಿಕಾ ಆಫೀಸ್‌ನಲ್ಲಿ ಭಾಗ್ಯ ರಂಪಾಟ ಮಾಡಿದ್ದಾಳೆ. ಅತ್ತೆ ಮಾವನಿಗೆ ಅವಮಾನ ಮಾಡಿದಕ್ಕೆ ಭಾಗ್ಯ, ಕನ್ನಿಕಾಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾಳೆ. ಪೂಜಾ, ಕುಸುಮಾ ಮತ್ತು ಧರ್ಮರಾಜ್ ಕೂಡ ಭಾಗ್ಯಾಗೆ ಸಾಥ್ ನೀಡಿದ್ದಾರೆ. ಭಾಗ್ಯ, ಕನ್ನಿಕಾಗೆ ಎಚ್ಚರಿಕೆ ನೀಡಿ, ಇನ್ನು ಮುಂದೆ ಯಾವತ್ತೂ ನನ್ನ ವಿಚಾರಕ್ಕೆ ಬರಬೇಡ, ನಿನ್ನನ್ನು ಹೇಗೆ ವಿಚಾರಿಸಿಕೊಳ್ಳಬೇಕು ಎನ್ನುವುದು ನನಗೆ ತಿಳಿದಿದೆ ಎನ್ನುತ್ತಾಳೆ. ಜತೆಗೆ, ಕನ್ನಿಕಾಳ ಆಫೀಸ್ ಸಿಬ್ಬಂದಿಗೂ ಎಚ್ಚರಿಕೆ ನೀಡಿದ ಭಾಗ್ಯ, ಮುಂದೆ ಒಂದು ದಿನ ನಿಮ್ಮನ್ನು ಕೂಡ ಇದೇ ರೀತಿ ಕನ್ನಿಕಾ ಬಲಿಪಶು ಮಾಡುತ್ತಾಳೆ ಎಂದು ಹೇಳುತ್ತಾಳೆ. ಬಳಿಕ, ಅಲ್ಲಿಂದ ತೆರಳುತ್ತಾಳೆ. ಕನ್ನಿಕಾಗೆ ಎಲ್ಲರ ಮುಂದೆ ಮತ್ತೊಮ್ಮೆ ಅವಮಾನವಾಗುತ್ತದೆ.

ಮನೆಗೆ ಬಂದ ತನ್ವಿ, ಬೇಸರದಲ್ಲಿ ಕುಳಿತಿದ್ದಾಳೆ. ಅವಳ ಸಹಪಾಠಿಗಳು ಆಡಿದ ಮಾತು ಅವಳಲ್ಲಿ ಚಿಂತೆಯನ್ನುಂಟುಮಾಡಿದೆ. ಬರ್ತ್‌ಡೇ ...