ಭಾರತ, ಏಪ್ರಿಲ್ 17 -- 18ನೇ ಆವೃತ್ತಿಯ ಐಪಿಎಲ್​ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿದೆ. ಪಂಜಾಬ್ ಕಿಂಗ್ಸ್ ಮತ್ತು ಕೆಕೆಆರ್ ಪಂದ್ಯದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ಮನರಂಜನೆಯ ರಸದೌತಣ ಉಣಬಡಿಸಿತು. ಯಾವಾಗ ಬೇಕಾದರೂ ಪಂದ್ಯದ ಚಿತ್ರಣ ಬದಲಾಗಬಹುದು ಎಂಬುದಕ್ಕೆ ಐಪಿಎಲ್​ನ 32ನೇ ಪಂದ್ಯ ಸಾಕ್ಷಿ. ಕೊನೆಯ ಎಸೆತದ ತನಕ ತನ್ನದೇ ಎಂದು ಷರಾ ಬರೆದಿಟ್ಟಿದ್ದ ರಾಯಲ್ಸ್ ತನ್ನ ಎದುರಿದ್ದ ಚಿನ್ನದಂಥ ಅವಕಾಶಗಳನ್ನು ಕೈಚೆಲ್ಲಿ ಸೂಪರ್​ ಓವರ್​​ನಲ್ಲಿ ಮುಗ್ಗರಿಸಿತು. ಇನ್ನಿಂಗ್ಸ್​ದುದ್ದಕ್ಕೂ ಏಕಪಕ್ಷೀಯವಾಗಿ ಸಾಗಿದ ಪರಿಣಾಮ ತನ್ನದಲ್ಲದ ಪಂದ್ಯ ಎಂದು ಭಾವಿಸಿದ್ದ ಡೆಲ್ಲಿ ಸೂಪರ್ ಡೂಪರ್​ ಗೆಲುವಿನೊಂದಿಗೆ ಸಂಭ್ರಮಿಸಿದೆ.

ರಾಯಲ್ಸ್ ವಿರುದ್ಧ ಪಡೆದಿದ್ದು ಒಂದೇ ವಿಕೆಟ್ ಆದರೂ ಇನ್ನಿಂಗ್ಸ್​ನ 20ನೇ ಓವರ್​​ ಮತ್ತು ಸೂಪರ್​ ಓವರ್​​ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಹಿನ್ನೆಲೆ ಡೆಲ್ಲಿ ವೇಗಿ ಮಿಚೆಲ್ ಸ್ಟಾರ್ಕ್​ ಗೆಲುವಿನ ರೂವಾರಿಯಾದರು. 2025ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನ...