ಭಾರತ, ಮೇ 1 -- ಅದೊಂದು ಪೋಷಕರ (Parents Meeting) ಸಭೆ. ಶಾಲಾ ಮುಖ್ಯಸ್ಥರು ಕೆಲವು ಮಾತುಗಳನ್ನಾಡಲು ನನ್ನನ್ನು ಆಹ್ವಾನಿಸಿದ್ದರು. ನಾನು ಭಾಷಣಕ್ಕಿಂತ ಹೆಚ್ಚಾಗಿ ಮಾತುಕತೆಯನ್ನು ಇಷ್ಟಪಡುತ್ತೇನೆ. ಹಾಗಾಗಿ 10 ನಿಮಿಷ ಮಾತನಾಡಿ ಪೋಷಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ. ಒಬ್ಬ ಮಹಿಳೆ ತನ್ನ ಕಷ್ಟಗಳನ್ನು ಹೇಳಿಕೊಂಡಳು 'ನನ್ನ ಮಗು ಏಳು ವರ್ಷದವನು, ನಾನು ಸಂಜೆ ಕೆಲಸದಿಂದ ಬಂದು ಮನೆಗೆಲಸ ಮಾಡುವಾಗಲೇ ಅವನು ಬಂದು ಹೆಚ್ಚು ತೊಂದರೆ ಕೊಡುತ್ತಾನೆ. ಇದು ಒಂದು ರೀತಿಯ Attention seeking Behaviour, ಹಾಗಾಗಿ ಇದನ್ನು ಕಡೆಗಣಿಸಿ ಅವನಿಗೆ ತನ್ನ ಕೆಲಸ ಮಾಡಿಕೊಳ್ಳುವ ಶಿಸ್ತು ಕಲಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಹಾಗೆ ಮಾಡಿದರೆ ಅವನ ಸಿಟ್ಟು ಗಲಾಟೆ ಹೆಚ್ಚಾಗುತ್ತದೆ. ಅವನನ್ನು ಸರಿ ಮಾಡುವುದು ಹೇಗೆ?'.

'ಕಚೇರಿಯಿಂದ ಮನೆಗೆ ಬಂದ ಪತಿ ನಿಮ್ಮನ್ನು ಮಾತನಾಡಿಸದೇ ಅಥವಾ ನೆಪ ಮಾತ್ರಕ್ಕೆ ಒಂದೆರಡು ಮಾತನಾಡಿ ಮೊಬೈಲ್‌ ಹಿಡಿದು ಕುಳಿತರೆ ನಿಮಗೇನೆನ್ನಿಸುತ್ತದೆ?' ನನ್ನ ಮರು ಪ್ರಶ್ನೆಯಾಗಿತ್ತು. 'ಸಿಟ್ಟು, ಬೇಸರ ಎ...