ಭಾರತ, ಮಾರ್ಚ್ 16 -- ಪಾಕಿಸ್ತಾನ ಕ್ರಿಕೆಟ್‌ ತಂಡದ ಸೋಲಿನ ಸರಪಳಿ ಮುಂದುವರೆದಿದೆ. ಇತ್ತೀಚೆಗಷ್ಟೇ ತವರಿನ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮುಗ್ಗರಿಸಿದ್ದ ತಂಡವು, ಇದೀಗ ನ್ಯೂಜಿಲೆಂಡ್‌ ವಿರುದ್ಧದ (New Zealand vs Pakistan 1st T20I) ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲಿನ ಆರಂಭ ಪಡೆದಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿವೀಸ್‌ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅತ್ತ ಪಾಕಿಸ್ತಾನ ತಂಡವು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸೋಲಿನ ಸರಪಳಿ ಮುಂದುವರೆಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನದ ನಂತರ ಮೊದಲ ಬಾರಿಗೆ ನಾಯಕನಾಗಿ ಸಲ್ಮಾನ್ ಅಲಿ ಆಘಾ ತಂಡವನ್ನು ಮುನ್ನಡೆಸಿದರು. ಹೊಸ ಲುಕ್‌ನಲ್ಲಿ ತಂಡವು ಕಣಕ್ಕಿಳಿದರೂ, ತಂಡಕ್ಕೆ ನಿರೀಕ್ಷಿತ ಫಲಿತಾಂಶ ಬರಲಿಲ್ಲ. 2026ರ ಟಿ20 ವಿಶ್ವಕಪ್‌ ಗೆಲ್ಲುವ ನಿಟ್ಟಿನಲ್ಲಿ ಭರಪೂರ ಸಿದ್ಧತೆ ಆರಂಭಿಸಿರುವ ಪಿಸಿಬಿಗೆ ಆರಂಭಿಕ ಹಿನ್ನಡೆ...