ಭಾರತ, ಮೇ 13 -- ಕ್ರಿಕೆಟ್ ಇತಿಹಾಸದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಈ ಹಿಂದೆ ನಡೆದಿರಲಿಲ್ಲ, ಮುಂದೆದೂ ನಡೆಯುವುದೂ ಅಸಾಧ್ಯ. ವಿಚಿತ್ರ ಗೆಲುವು ಸಾಧಿಸಿ ವಿಶ್ವಕಪ್​ಗೂ ಅರ್ಹತೆ ಪಡೆದುಕೊಂಡಿದೆ. ಅದರಲ್ಲೂ ಆ ತಂಡದ ತಂತ್ರ, ಬುದ್ಧಿವಂತಿಕೆ, ಧೈರ್ಯಕ್ಕೆ ಸಲಾಂ ಹೇಳಲೇಬೇಕು.

ಮೈದಾನಕ್ಕಿಳಿದ ಹತ್ತಕ್ಕೆ ಬ್ಯಾಟರ್ಸ್​ ರಿಟೈರ್ಡ್ ಔಟ್ ಆದ ಘಟನೆ ಕ್ರಿಕೆಟ್ ಚರಿತ್ರೆಯಲ್ಲಿ ನಡೆದಿದ್ದು ಇದೇ ಮೊದಲು. ಆರಂಭಿಕರು ಇಬ್ಬರು ರನ್ ಗಳಿಸಿದ್ದು ಬಿಟ್ಟರೆ ಉಳಿದಂತೆ ಯಾರೂ ರನ್ ಗಳಿಸಿಲ್ಲ. ಎಲ್ಲರೂ ಶೂನ್ಯಕ್ಕೆ ರಿಟೈರ್ಡ್ ಹರ್ಟ್ ಆಗಿರುವುದು ವಿಶೇಷ.

ಬ್ಯಾಂಕಾಕ್‌ನ ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಪ್ರದೇಶ ಅರ್ಹತಾ ಪಂದ್ಯದಲ್ಲಿ ಕತಾರ್ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಯುಎಇ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯ ನಡೆದಿದ್ದು ಮೇ 10ರಂದು.

ಮೊದಲು ಬ್ಯಾಟಿಂಗ್ ನಡೆಸಿದ ಯುಎಇ ಮಹಿಳಾ ತಂಡ 16 ಓವರ್​​ಗಳಲ್ಲಿ ವಿಕೆಟ್ ನಷ್ಟ ಇಲ್ಲದೆ 192 ರನ್ ಪ...