ಭಾರತ, ಮಾರ್ಚ್ 20 -- ಇತ್ತೀಚೆಗೆ ಭಾರತ ಕ್ರಿಕೆಟ್‌ ತಂಡವು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವಲ್ಲಿ ಕನ್ನಡಿಗ ಕೆಎಲ್‌ ರಾಹುಲ್ (KL Rahul) ಕೊಡುಗೆ ಸ್ಮರಿಸಲೇಬೇಕು. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡದ ಫೈನಲ್‌ವರೆಗಿನ ಅಜೇಯ ಯಾತ್ರೆಯಲ್ಲಿ ರಾಹುಲ್ ಆಟ ಮಹತ್ವದ್ದು. ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯಲು ಎಲ್ಲಾ ಸವಾಲು, ಪರೀಕ್ಷೆಗಳನ್ನು ಎದುರಿಸಿರುವ ಕನ್ನಡಿಗ, ತಂಡಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದಾರೆ. ಇದೀಗ ಐಪಿಎಲ್‌ ಪಂದ್ಯಾವಳಿಯಲ್ಲಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿರುವ ರಾಹುಲ್, ನಾಯಕತ್ವದ ಜವಾಬ್ದಾರಿಯನ್ನು ನಾಜೂಕಾಗಿ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ. ತಮಗೆ ಅರ್ಹವಾಗಿ ಸಿಗಬೇಕಿದ್ದ ಆರಂಭಿಕನ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಾಗಿದೆ.

ಕೆಎಲ್‌ ರಾಹುಲ್ ಎದುರಿಸಿದ ಸವಾಲುಗಳು ಒಂದಲ್ಲ ಎರಡಲ್ಲ. ಭಾರತ ತಂಡದಲ್ಲಿ ನೆಲೆಯೂರಲು ಆರಂಭಿಕನಾಗಿ ಆಡಿದ್ದಾರೆ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದಾರೆ, ಫಿನ...