Bangalore, ಮೇ 5 -- ಬೆಂಗಳೂರು: ದಿನಸಿ, ಮೆಡಿಸಿನ್ ಮೊದಲಾದ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿ ಕಾಯುತ್ತಿದ್ದೀರಾ? ಟ್ರಾಫಿಕ್ ಸಮಸ್ಯೆಯಿಂದಾಗಿ ಡೆಲಿವರಿ ತಡವಾಗುತ್ತಿದೆಯೇ? ಇನ್ನು ಮುಂದೆ ಅಂತಹ ಸಮಸ್ಯೆ ಕಾಣಲಿಕ್ಕಿಲ್ಲ. ನೀವು ಬುಕ್ ಮಾಡಿದ ವಸ್ತುಗಳು ನೇರವಾಗಿ, ತಡವಾಗದೆ ನಿಮ್ಮ ಮನೆ ಬಾಗಿಲಿಗೆ ಬರುತ್ತವೆ. ನಗರದ ಕನಕಪುರ ರಸ್ತೆಯ ಪ್ರತಿಷ್ಠಿತ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್ ಬಿಗ್ ಬ್ಯಾಸ್ಕೆಟ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಆರ್ಡರ್ ಮಾಡಿದ ವಸ್ತುಗಳು 5 ರಿಂದ 10 ನಿಮಿಷಗಳ ಒಳಗಾಗಿ ಡೆಲಿವರಿ ಕೊಡಲಾಗುತ್ತದೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಡೆಲಿವರಿ ವೇದಿಕೆಯೊಂದರ ಜತೆ ಪಾಲುದಾರಿಕೆ ನಡೆದಿದೆ.ಮಾರ್ಚ್ ತಿಂಗಳಲ್ಲಿಯೇ ಈ ಯೋಜನೆಯ ಜಾರಿಗೆ ಟ್ರಯಲ್ ನಡೆದಿತ್ತದರೂ ಕಳೆದ ವಾರ ಅಧಿಕೃತವಾಗಿ ಜಾರಿಗೊಂಡಿದೆ ಎಂದು ಬಿಗ್ ಬ್ಯಾಸ್ಕೆಟ್ ತಿಳಿಸಿದೆ.
ಬೆಂಗಳೂರು ಅಪಾರ್ಟ್ ಮೆಂಟ್ ಫೆಡರೇಷನ್ ಫಾರ್ ಬೆಂಗಳೂರು ಸೌತ್ ಅಧ್ಯಕ್ಷ ಹಾಗೂ ಪ್ರೆಸ್ಟೀಜ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.