ಭಾರತ, ಏಪ್ರಿಲ್ 20 -- ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ರಂಜನಿ ರಾಘವನ್‌ ಇದೀಗ ನಿರ್ದೇಶಕಿಯ ಕ್ಯಾಪ್‌ ತೊಟ್ಟಿದ್ದಾರೆ. ರಂಜಿನಿ ರಾಘವನ್‌ ಅವರು ಡಿ ಡಿ ಢಿಕ್ಕ ಎಂಬ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕನ್ನಡ ಸಿನಿಮಾಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜನನ್ನು ರಂಜಿನಿ ಕರೆತರುತ್ತಿದ್ದಾರೆ. ಇತ್ತೀಚೆಗೆ ಪ್ರೇಮ್‌ ಹುಟ್ಟುಹಬ್ಬದಂದು ಈ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಗಿತ್ತು.

ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್‌ ಜತೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮಗ ವಿಹಾನ್‌ ಕೂಡ ನಟಿಸುತ್ತಿದ್ದಾನೆ. ಈ ಸಿನಿಮಾ ಈಗ ನಿರ್ಮಾಣ ಹಂತದಲ್ಲಿದೆ.

ನಿರ್ದೇಶಕ ಮತ್ತು ಕಾಟೇರ ಸಿನಿಮಾದ ಕಥೆಗಾರ ಜಡೇಶ್‌ ಕೆ ಹಂಪಿ ಈ ಸಿನಿಮಾದ ಪ್ರೊಡ್ಯುಸರ್‌ ಆಗಿದ್ದಾರೆ. ಈ ಸಿನಿಮಾಕ್ಕೆ ಇಳೆಯರಾಜ ಸಂಗೀತ ನೀಡಲಿದ್ದಾರೆ.

ಚೊಚ್ಚಲ ನಿರ್ದೇಶಕಿಯಾಗಿರುವ ರಂಜನಿಗೆ ಹೆಚ್ಚು ಅನುಭವಿ ಚಲನಚಿತ್ರ ನಿರ್ಮಾಪಕರ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ತಿಳಿಯಿತಂತೆ. ಇದಕ್ಕಾಗಿ ಪ್ರಮ...