ಭಾರತ, ಮಾರ್ಚ್ 24 -- ಐಪಿಎಲ್ 2025ರ ಆವೃತ್ತಿಯೂ ಮೂರನೇ ದಿನಕ್ಕೆ ಕಾಲಿಟ್ಟಿದೆ. ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (Delhi Capitals vs Lucknow Super Giants) ತಂಡಗಳು ಮುಖಾಮುಖಿಯಾಗಲಿವೆ. ವಿಶಾಖಪಟ್ಟಣದ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಋತುವಿನ ಮೊದಲ ಪಂದ್ಯಕ್ಕೆ ಇದು ಡೆಲ್ಲಿ ತಂಡದ ತವರು ಮೈದಾನವಾಗಲಿದೆ. ಈ ಬಾರಿ ಅಕ್ಷರ್ ಪಟೇಲ್ ಅವರ ನಾಯಕತ್ವದೊಂದಿಗೆ ಡಿಸಿ ಕೂಡಾ ಹಲವು ಹೊಸತನಗಳೊಂದಿಗೆ ಕಣಕ್ಕಿಳಿಯುತ್ತಿದೆ. ಹರಾಜಿಗೂ ಮುಂಚಿತವಾಗಿ ರಿಷಭ್ ಪಂತ್ ಅವರನ್ನು ಕೈಬಿಟ್ಟ ಫ್ರಾಂಚೈಸಿಯು, ಹರಾಜಿನಲ್ಲಿ ಹೊಸ ಆಟಾರರಿಗೆ ಮಣೆ ಹಾಕಿತು. ಕೆಎಲ್‌ ರಾಹುಲ್‌, ಫಾಫ್‌ ಡುಪ್ಲೆಸಿಸ್ ಅವರಂಥ ಆಟಗಾರರರು ತಂಡದ ಬಲ ಹೆಚ್ಚಿಸಲಿದ್ದಾರೆ.

ಡೆಲ್ಲಿ ತಂಡಕ್ಕೆ ಮೊದಲ ಪಂದ್ಯದಲ್ಲೇ, ಮಾಜಿ ನಾಯಕ ಪಂತ್ ನೇತೃತ್ವದ ಎಲ್‌ಎಸ್‌ಜಿ ಎದುರಾಳಿ. ಲಕ್ನೋ ತಂಡಕ್ಕೆ ಮೊದಲ ಪಂದ್ಯದಲ್ಲೇ ಗಾಯಾಳುಗಳ ಸಮಸ್ಯೆ ದೊಡ್ಡದಿದೆ. ಮಯಾಂಕ್...