ಭಾರತ, ಏಪ್ರಿಲ್ 19 -- ಗುಜರಾತ್‌ ಟೈಟನ್ಸ್‌ ತಂಡ ಗೆಲುವಿನ ಹಳಿಗೆ ಮರಳುವ ಜೊತೆಗೆ ಐಪಿಎಲ್‌ 18ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ತವರು ಮೈದಾನದಲ್ಲಿ ಅಬ್ಬರಿಸಿದ ಶುಭ್ಮನ್‌ ಗಿಲ್‌ ಬಳಗವು, ಟೂರ್ನಿಯಲ್ಲಿ ಐದನೇ ಗೆಲುವು ಸಾಧಿಸುವ ಮೂಲಕ ತಮ್ಮ ಫಾರ್ಮ್‌ ಮುಂದುವರೆಸಿದೆ. ಜಾಸ್‌ ಬಟ್ಲರ್‌ ಅಜೇಯ 97 ರನ್‌ ಸಿಡಿಸುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದ್ದಾರೆ. ಕೊನೆಯ ಎರಡು ಎಸೆತಗಳಲ್ಲಿ ರಾಹುಲ್‌ ತೆವಾಟಿಯಾ ಒಂದು ಸಿಕ್ಸರ್‌ ಹಾಗೂ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌, 203 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ‌ ಯಶಸ್ವಿ ಚೇಸಿಂಗ್ ನಡೆಸಿದ ಟೈಟನ್ಸ್‌, 19.2 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ ಮಾತ್ರ ಕಳೆದುಕೊಂಡು 204 ರನ್‌ ಗಳಿಸಿ ಗೆದ್ದು ಬೀಗಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಯಾರೊಬ್ಬರೂ ಅರ್ಧಶತಕ ಗಳಿಸಿಲ್ಲ. ಆದರೂ ತಂಡದ ಸಾಂಘಿಕ ಹೋರಾಟದ...